Latest

ಕಾರಿನ ಮೇಲೆ ಮೂತ್ರ ಮಾಡಿದ ಶ್ವಾನ; ವೃದ್ಧನ ಹಲ್ಲನ್ನೇ ಮುರಿದ ವ್ಯಕ್ತಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವೃದ್ದ ದಂಪತಿಗಳು ಸಾಕಿದ್ದ ಶ್ವಾನವೊಂದು ಎದುರು ಮನೆಯ ಕಾರಿನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ಕೋಪಗೊಂಡ ವ್ಯಕ್ತಿ ವೃದ್ದನಿಗೆ ಕಲ್ಲಿನಿಂದ ಹೊಡೆದು ಹಲ್ಲನ್ನೇ ಮುರಿದ ಘಟನೆ ಬೆಂಗಳೂರಿನ ಬಾಣಸವಾಡಿಯಲ್ಲಿ ನಡೆದಿದೆ.

71 ವರ್ಷದ ಗೇರಿ ರೋಜಾರಿಯಾ ಹಲ್ಲೆಗೊಳಗಾದ ವೃದ್ಧ. ಬಾಣಸವಾಡಿಯ ಚಿನ್ನಪ್ಪ ಲೇಔಟ್ ನಿವಾಸಿ. ಗೇರಿ ರೊಜಾರಿಯಾ ದಂಪತಿ ನಾಯಿಯೊಂದನ್ನು ಸಾಕಿದ್ದರು. ಆದರೆ ಎದುರು ಮನೆಯ ಚಾರ್ಲ್ಸ್ ಎಂಬುವವರ ಐಷಾರಾಮಿ ಕಾರಿನ ಮೇಲೆ ಮೂತ್ರ ವಿಸರ್ಜನೆ ಮಾಡಿದೆ.

ಇದರಿಂದ ರೊಚ್ಚಿಗೆದ್ದ ಚಾರ್ಲ್ಸ್, ವೃದ್ದನ ಜೊತೆ ಜಗಳಕ್ಕಿಳಿದಿದ್ದಾನೆ. ಇಬ್ಬರ ನಡುವೆ ವಾಗ್ವಾದ ನಡೆದು ಕೊನೆಗೆ ಚಾರ್ಲ್ಸ್ ವೃದ್ಧನ ಮೇಲೆ ಕಲ್ಲೆಸೆದಿದ್ದಾನೆ. ಕಲ್ಲೇಟಿನ ರಭಸಕ್ಕೆ ವಯೋವೃದ್ಧ ರೊಜಾರಿಯಾ ಅವರ ಹಲ್ಲು ಮುರಿದಿದೆ. ಈ ದೃಶ್ಯ ಸಿಸಿಟಿವಿ ಕ್ಯಾಮರದಲ್ಲಿ ಸೆರೆಯಾಗಿದೆ.

ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಂತೆ ಚಾರ್ಲ್ಸ್ ತನ್ನ ಐಷಾರಾಮಿ ಕಾರು ಸಮೇತ ಪರಾರಿಯಾಗಿದ್ದಾನೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button