Latest

6 ವರ್ಷಗಳ ಹಿಂದೆ ಕಾಣೆಯಾಗಿದ್ದ ತಾಯಿ-ಮಗನನ್ನು ಒಂದು ಮಾಡಿದ ಆಧಾರ್ ಕಾರ್ಡ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: 6 ವರ್ಷಗಳ ಬಳಿಕ ತಾಯಿ ಹಾಗೂ ಮೂಕ ಮಗನನ್ನು ಆಧಾರ್ ಕಾರ್ಡ್ ಒಂದು ಮಾಡಿದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ತಾಯಿಯ ಜತೆ ಯಲಹಂಕದಲ್ಲಿ ತರಕಾರಿ ಮಾರಾಟಕ್ಕೆ ಬಂದಿದ್ದ ಮಗ ಆರು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ. ಆಗಿನ್ನು ನಾಪತ್ತೆಯಾಗಿದ್ದ ಮಗ ಭರತ್ ಗೆ 13 ವರ್ಷ. ಮೂಗ ಮಗನನ್ನು ಕಾಣದೇ ಕಂಗಾಲಾಗಿದ್ದ ತಾಯಿ ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಗನಿಗಾಗಿ ಕಂಡ ಕಂಡ ದೇವರಲ್ಲಿ ಹರಕೆ ಹೊತ್ತಿದ್ದರು.

Related Articles

ಅಂದು ನಾಪತ್ತೆಯಾಗಿದ್ದ ಮಗ ಭರತ್ 10 ತಿಂಗಳ ಬಳಿಕ ನಾಗ್ಪುರ ರೈಲು ನಿಲ್ದಾಣದಲ್ಲಿ ಪತ್ತೆಯಾಗಿದ್ದ. ದಿಕ್ಕು ತೋಚದೆ ಅಲೆದಾಡುತ್ತಿದ್ದ ಭರತ್ ನನ್ನು ರೈಲ್ವೆ ಭದ್ರತಾ ಪಡೆಗಳು ರಕ್ಷಿಸಿದ್ದರು. ಆದರೆ ಆತನನ್ನು ತಾಯಿ ಮಡಿಲಿಗೆ ಸೇರಿಸಲು ಸಾಧ್ಯವಾಗಿರಲಿಲ್ಲ.

6 ವರ್ಷಗಳಿಂದ ಆಸ್ರಯ ಪಡೆದಿದ್ದ ಭರತ್ ಗೆ ಆಧಾರ್ ಕಾರ್ಡ್ ಮಾಡಿಸಲು ಪುನ್ರ್ವಸತಿ ಕೇಂದ್ರದ ಅಧಿಕಾರಿಗಳು ನಿರ್ಧರಿಸಿದ್ದರು. 2022ರ ಜನವರಿಯಲ್ಲಿ ಭರತ್ ನನ್ನು ಮಹೇಶ್ ಎಂಬ ಅಧಿಕಾರಿ ಸಂಪರ್ಕಿಸಿ ಆಧಾರ್ ಕಾರ್ಡ್ ಗಾಗಿ ಆತನ ಬೆಳಚ್ಚು ಪಡೆದಿದ್ದರು. ಬಳಿಕ ಅನಿಲ್ ಮರಾಠೆ ಎಂಬ ಅಧಿಕಾರಿ ಭರತ್ ಹೊಸ ಆಧಾರ್ ಕಾರ್ಡ್ ತಿರಸ್ಕೃತಗೊಂಡಿದೆ. ಈಗಾಗಲೇ ಬಿ.ಭರತ್ ಕುಮಾರ್ ಹೆಸರಲ್ಲಿ ಆಧಾರ್ ಕಾರ್ಡ್ ಇರುವುದಾಗಿ ಮಾಹಿತಿ ನೀಡಿದ್ದರು. ಭರತ್ ವಿಳಾಸ ಪತ್ತೆ ಹಚ್ಚುವಂತೆ ಮಹೇಶ್ ಎಂಬ ಅಧಿಕಾರಿ ಸೂಚಿಸಿದ್ದರು.

ಅಧಿಕಾರಿ ಮಹೇಶ್ ಮನವಿಗೆ ಸ್ಪಂದಿಸಿದ ಆಧಾರ್ ಕೇಂದ್ರದ ಅಧಿಕಾರಿಗಳು ಬಿ.ಭರತ್ ಕುಮಾರ್ ಹೆಸರಲ್ಲಿದ್ದ ಬೆರಳಚ್ಚನ್ನು ಹಾಗೂ ಹೊಸದಾಗಿ ಪಡೆದಿದ್ದ ಬೆರಳಚ್ಚನ್ನು ಹೋಲಿಕೆ ಮಾಡಿ ನೋಡಿದ್ದಾರೆ. ಎರಡೂ ಸಾಮ್ಯತೆ ಇರುವುದು ಗೊತ್ತಾಗಿದೆ. ಆಧಾರ್ ಕಾರ್ಡ್ ನಲ್ಲಿದ್ದ ಭರತ್ ತಾಯಿಯ ಮೊಬೈಲ್ ನಂಬರ್ ಸಿಕ್ಕಿದ್ದು ಮಹೇಶ್ ಎಂಬ ಅಧಿಕಾರಿಗೆ ನೀಡಿದ್ದಾರೆ. ನಾಗ್ಪುರ ಪುನರ್ವಸತಿ ಕೇಂದ್ರದ ಅಧಿಕಾರಿಗಳು ಬೆಂಗಳೂರು ಯಲಹಂಕ ಪೊಲೀಸರನ್ನು ಸಂಪರ್ಕಿಸಿ ಭರತ್ ತಾಯಿಯನ್ನು ಪತ್ತೆಹಚ್ಚಿದ್ದಾರೆ. ಭರತ್ ತಾಯಿ ಪಾರ್ವತಮ್ಮನನ್ನು ಪತ್ತೆ ಮಾಡಿ ಇನ್ಸ್ ಪೆಕ್ಟರ್ ಕೆ.ಪಿ.ಸತ್ಯನಾರಾಯಣ್ ಅವರೊಂದಿಗೆ ಪಾರ್ವತಮ್ಮರನ್ನು ನಾಗ್ಪುರಕ್ಕೆ ಕಳುಹಿಸಿದ್ದಾರೆ. ಇದೀಗ 6 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮಗ ಪತ್ತೆಯಾಗಿದ್ದು, ತಾಯಿ ಮಡಿಲು ಸೇರಿದ್ದಾನೆ.
ಭೀಕರ ಅಗ್ನಿ ದುರಂತ; 7 ಜನ ಸಜೀವ ದಹನ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button