Latest

ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಕಳಕಳಿ: ದಸರಾ ವೈಭವಕ್ಕೆ ವೇದಿಕೆಯಾದ ರೈಲು ನಿಲ್ದಾಣ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಾಡ ಹಬ್ಬ ದಸರಾ ಮಹೋತ್ಸವ ಎಂದರೆ ನೆನಪಾಗುವುದೇ ಗೊಂಬೆಗಳ ಪೂಜೆ, ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂಸವಾರಿ. ನಾಡಹಬ್ಬ ದಸರಾವನ್ನು ದೇಶಾದ್ಯಂತ ಪರಿಚಯಿಸುವ ನಿಟ್ಟಿನಲ್ಲಿ ರೈಲ್ವೆ ಪೊಲೀಸ್ ಇಲಾಖೆ ಎಡಿಜಿಪಿ ಭಾಸ್ಕರ್ ರಾವ್ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಬೆಂಗಳೂರಿನ ರೈಲು ನಿಲ್ದಾಣ ಇದೀಗ ದಸರಾ ವೈಭವಕ್ಕೆ ವೇದಿಕೆಯಾಗಿದೆ.

ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ದಸರಾ ಗೊಂಬೆ ಪ್ರದರ್ಶನ ಏರ್ಪಡಿಸಲಾಗಿದೆ. ದಸರಾ ಮಹತ್ವ ಸಾರುವ ಗೊಂಬೆಗಳು, ಜಂಬೂಸವಾರಿ ಮಹತ್ವ ತಿಳಿಸುವ ಅಲಂಕೃತ ಆನೆ ಸೇರಿದಂತೆ ವಿವಿಧ ಗೊಂಬೆಗಳನ್ನು ಇಡಲಾಗಿದೆ.

 

ರಾಜ್ಯ ಮಾತ್ರವಲ್ಲ, ಅಂತರಾಜ್ಯ ಪ್ರಯಾಣಿಕರೂ ರೈಲ್ವೆ ನಿಲ್ದಾಣಕ್ಕೆ ಬರುವುದರಿಂದ ನಮ್ಮ ನಾಡ ಹಬ್ಬ ದಸರಾ ಮಹತ್ವವನ್ನು ಬೇರೆ ಬೇರೆ ರಾಜ್ಯಗಳಿಗೂ ಸಾರುವ ಮಹತ್ಕಾರ್ಯವನ್ನು ಭಾಸ್ಕರ್ ರಾವ್ ಕೈಗೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ರೈಲ್ವೆ ಪೊಲೀಸ್ ಎಡಿಜಿಪಿ ಭಾಸ್ಕರ್ ರಾವ್, ರೈಲ್ವೆ ನಿಲ್ದಾಣದಲ್ಲಿ ಗೊಂಬೆಗಳ ಪ್ರದರ್ಶನದ ಉದ್ದೇಶ ನಮ್ಮ ನಾಡಿನ ಹಬ್ಬ ದಸರಾ ಮಹತ್ವ ಜನರಿಗೆ ಗೊತ್ತಾಗಬೇಕು, ಕನ್ನಡಿಗರಿಗೆ ಮಾತ್ರವಲ್ಲ ವಿವಿಧ ರಾಜ್ಯಗಳ ಜನರಿಗೂ ನಮ್ಮ ನಾಡ ಹಬ್ಬದ ವಿಶೇಷತೆ, ಸಂಸ್ಕೃತಿ ತಿಳಿಸಬೇಕು. ಈ ಮೂಲಕ ದೇಶದ ಮೂಲೆ ಮೂಲೆಗಳಿಗೂ ಕನ್ನಡದ ಕಂಪು ಪಸರಿಸಬೇಕು ಎಂಬುದಾಗಿದೆ ಎಂದರು.

ರೈಲು ನಿಲ್ದಾಣಕ್ಕೆ ಬರುತ್ತಿರುವ ಪ್ರಯಾಣಿಕರು ಗೊಂಬೆಗಳ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಾ ಖುಷಿ ಪಡುತ್ತಿದ್ದಾರೆ. ಭಾಸ್ಕರ್ ರಾವ್ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರ ಕನ್ನಡಿಭಿಮಾನ, ನಾಡ ಹಬ್ಬದ ಮೇಲಿರುವ ಅವರಿಗಿರುವ ಪ್ರೀತಿ ಶ್ಲಾಘನೀಯ ಎಂದಿದ್ದಾರೆ.

ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್; ರಾಜಕೀಯಕ್ಕೆ ಎಂಟ್ರಿ?
ಯಡೂರಿನ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಸಚಿವೆ ಶಶಿಕಲಾ ಜೊಲ್ಲೆ ಭೇಟಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Check Also
Close
Back to top button