ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಂಗಳೂರಿನಲ್ಲಿರುವ ಶ್ರೀ ವಸಿಷ್ಠ ಸಹಕಾರಿ ಬ್ಯಾಂಕ್ ಗ್ರಾಹಕರಿಗೆ ಕೋಟ್ಯಂತ ರೂಪಾಯಿ ವಂಚಿಸಿದ್ದು, ಬ್ಯಾಂಕಿನ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಮುಖ್ಯಸ್ಥರು ಪರಾರಿಯಾಗಿರುವ ಘಟನೆ ನಡೆದಿದೆ.
ಹನುಮಂತನಗರದಲ್ಲಿರುವ ವಸಿಷ್ಠ ಸಹಕಾರಿ ಬ್ಯಾಂಕ್ ನಿಂದ ವಂಚನೆ ನಡೆದಿದ್ದು, ಕಳೆದ ಡಿಸೆಂಬರ್ ನಿಂದ ತನ್ನ ಠೇವಣಿದಾರರಿಗೆ ಮೆಚ್ಯೂರಿಟಿ ಹಣ, ಬಡ್ಡಿ ಹಣ ವನ್ನೂ ನೀಡದೇ ಮೋಸ ಮಾಡುತ್ತಿದೆ. ಪ್ರಶ್ನೆ ಮಾಡಿದರೆ ಲಾಕ್ ಡೌನ್ ನಿಂದಾಗಿ ಸಾಲ ಮರುಪಾವತಿಯಾಗುತ್ತಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ.
ಇದರಿಂದ ಕಂಗಾಲಾದ ಗ್ರಾಹಕರು ಹನುಮಂತನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಎಫ್ ಐ ಆರ್ ದಾಖಲಾಗುತ್ತಿದ್ದಂತೆ ಬ್ಯಾಂಕ್ ಮುಖ್ಯಸ್ಥ ವೆಂಕಟರಮಣ ಮತ್ತು ಕೃಷ್ಣಪ್ರಸಾದ್ ಪರಾರಿಯಾಗಿದ್ದಾರೆ. ಕಳೆದ 10 ವರ್ಷಗಳಿಂದ ವಹಿವಾಟು ನಡೆಸಿರುವ ಬ್ಯಾಂಕ್ ಜನಪ್ರಿಯ ವಿಶ್ವೇಶ್ವರೈಯ್ಯ ಕೋ ಆಪರೇಟೀವ್ ಸೊಸೈಟಿ ಅಧೀನದಲ್ಲಿ ನಡೆಯುತ್ತಿತ್ತು.
SSLC ಪರೀಕ್ಷೆ ದಿನಾಂಕ ಪ್ರಕಟ; ಸಭೆ ಬಳಿಕ ವೇಳಾಪಟ್ಟಿ ಘೋಷಣೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ