ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೂರೊನಾ ವೈರಸ್, ಲಾಕ್ ಡೌನ್ ನಿಂದಾಗಿ ರಾಜಧಾನಿ ಬೆಂಗಳೂರಿನ ಉದ್ಯೋಗಿಗಳಿಗೆ ಆರ್ಥಿಕ ಸಂಕಷ್ಟ ಎದುರಾಗಿದ್ದು, ಹೀಗೆ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದ ಟೆಕ್ಕಿಯೊಬ್ಬ ಕಾಲ್ ಬಾಯ್ ಆಗಲು ಹೋಗಿ 83 ಸಾವಿರ ರೂ. ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ.
ಕೊರೊನಾ ಲಾಕ್ ಡೌನ್ ನಿಂದಾಗಿ ಹಲವು ಕಂಪನಿಗಳು ಹಲವರನ್ನು ಕೆಲಸದಿಂದ ತೆಗೆದು ಹಾಕಿದ್ದರೆ, ಇನ್ನು ಹಲವು ಕಂಪನಿಗಳು ವರ್ಕ್ ಫ್ರಂ ಹೋಂ ಕೆಲಸ ನೀಡಿವೆ. ಈ ನಡುವೆ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದ ಟೆಕ್ಕಿ, ಇನ್ನೊಂದು ಕೆಲಸ ಹುಡುಕಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾನೆ.
ಅಮೃತಹಳ್ಳಿ ನಿವಾಸಿಯಾದ 26 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್, ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ. ಕೋವಿಡ್ 19 ಲಾಕ್‌ಡೌನ್‌ನಿಂದಾಗಿ ಕಂಪನಿ ಕೆಲಸದಿಂದ ಕೆಲ ಸಿಬ್ಬಂದಿಯನ್ನು ತೆಗೆದು ಹಾಕಿತ್ತು. ಮುಂದಿನ ದಿನದಲ್ಲಿ ನನ್ನನ್ನು ಕೆಲಸದಿಂದ ತೆಗೆದು ಹಾಕಬಹುದು ಎಂಬ ಆತಂಕದಿಂದ ಟೆಕ್ಕಿ ಬೇರೆ ಕೆಲಸವನ್ನು ಸರ್ಚ್ ಮಾಡುತ್ತಿದ್ದ. ಆನ್‌ಲೈನ್‌ನಲ್ಲಿ ಉದ್ಯೋಗ ಹುಡುಕುವಾಗ ಒಂದು ವೆಬ್‌ಸೈಟ್‌ಗೆ ಹೋಗಿ ಲಾಗಿನ್ ಆಗಿ ಉದ್ಯೋಗದ ಬಗ್ಗೆ ಮೊಬೈಲ್‌ನಲ್ಲಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆಯರ ಜೊತೆ ಲೈಂಗಿಕ ಕ್ರಿಯೆ ನಡೆಸಲು ಕಾಲ್ ಬಾಯ್ ಉದ್ಯೋಗವಿದೆ. ಇದಕ್ಕೆ ವೇತನವನ್ನು ಸಹ ಪಾವತಿಸಲಾಗುತ್ತದೆ ಎಂಬ ಪ್ರತಿಕ್ರಿಯೆ ಬಂದಿದೆ.
ಕಾಲ್ ಬಾಯ್ ಉದ್ಯೋಗವನ್ನು ಒಪ್ಪಿಕೊಂಡ ಬಳಿಕ ಟೆಕ್ಕಿಗೆ ನೋಂದಣಿ ಶುಲ್ಕ ಪಾವತಿಸಬೇಕು ಎಂದು ಹೇಳಿದ್ದಾರೆ. ಇದಾದ ಬಳಿಕ ಸದಸ್ಯತ್ವ ಶುಲ್ಕ,ಸ್ಟೇಟಸ್ ಕನ್ಫರ್ಮೇಶನ್ ಕೋಡ್ ಶುಲ್ಕ ಪಾವತಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ವ್ಯಕ್ತಿಗಳು ಹೇಳಿದಂತೆ ನೋಂದಣಿ ಶುಲ್ಕಕ್ಕಾಗಿ 1 ಸಾವಿರ ರೂ., ಸದಸ್ಯತ್ವಕ್ಕಾಗಿ 2,500 ರೂ., ಕನ್ಫರ್ಮೇಶನ್ ಕೋಡ್‌ಗಾಗಿ 70 ಸಾವಿರ ರೂ. ಸೇರಿ 83 ಸಾವಿರ ರೂ. ಹಣವನ್ನು ಗೂಗಲ್ ಪೇ ಮೂಲಕ ಪಾವತಿಸಿದ್ದಾರೆ. ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅಪರಿಚಿರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ