ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನೈಜಿರಿಯನ್ ಪ್ರಜೆಗಳ ಕಿರಿಕ್ ಬೆನ್ನಲ್ಲೇ ಇದೀಗ ಉಗಾಂಡಾ ಯುವತಿಯರ ಪುಂಡಾಟ ಮಿತಿ ಮೀರಿದ್ದು, ಕ್ಯಾಬ್ ಚಾಲಕನ ಜೊತೆ ಅಶ್ಲೀಲವಾಗಿ ವರ್ತಿಸಿ ಚಪ್ಪಲಿಯಿಂದ ಥಳಿಸಿದ ಆರೋಪ ಕೇಳಿಬಂದಿದೆ.
ಕಾಲೇಜು ಕಾರ್ಯಕ್ರಮವೊಂದಕ್ಕೆ ರಾಜಾಜಿನಗರಕ್ಕೆ ಬಂದಿದ್ದ ಉಗಾಂಡಾ ಮೂಲದ ಯುವತಿಯರು ಕಾರ್ಯಕ್ರಮ ಮುಗಿಸಿ ವಾಪಸ್ ಹೋಗುವಾಗ ಓಲಾ ಕ್ಯಾಬ್ ಬುಕ್ ಮಾಡಿದ್ದಾರೆ. ನಾಲ್ವರು ಯುವತಿಯರು ಕ್ಯಾಬ್ ಹತ್ತಿದ್ದಾರೆ. ಒಟಿಪಿ ಕೇಳುತಿದ್ದಂತೆ ಇನ್ನೋರ್ವ ಯುವಕ ಬಂದು ಕಾರ್ ಹತ್ತಲು ಮುಂದಾಗಿದ್ದಾನೆ.
ಈ ವೇಳೆ ಕ್ಯಾಬ್ ಚಾಲಕ 5 ಜನ ಕೂರಲು ಸಾಧ್ಯವಿಲ್ಲ ನಾಲ್ಕು ಜನರನ್ನು ಮಾತ್ರ ಕರೆದುಕೊಂಡು ಹೋಗುವುದಾಗಿ ತಿಳಿಸಿದ್ದಾನೆ. ಇದಕ್ಕೆ ಜಗಳವಾಡಿದ ಯುವತಿಯರು ಟ್ರಿಪ್ ಕ್ಯಾನ್ಸಲ್ ಮಾಡಿದ್ದಾರೆ. ಕ್ಯಾನ್ಸಲೇಷನ್ ಚಾರ್ಜ್ ಕೊಡುವಂತೆ ಹೇಳಿದಾಗ ಯುವತಿಯರು ನಿರಾಕರಿಸಿದ್ದಾರೆ. ಈ ವೇಳೆ ಯುವತಿಯರು ಹಾಗೂ ಕ್ಯಾಬ್ ಚಾಲಕನ ನಡುವೆ ಜಗಳ ನಡೆದಿದೆ. ಕ್ಯಾಬ್ ಚಾಲಕನನ್ನು ಚಪ್ಪಲಿಯಿಂದ ಯುವತಿಯರು ಥಳಿಸಿದ್ದಾರೆ ಅಲ್ಲದೇ ಖಾಸಗಿ ಅಂಗಾಂಗಗಳನ್ನು ಪ್ರದರ್ಶಿಸಿ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ.
ಕ್ಯಾಬ್ ಚಾಲಕ ಸಾಗರ್ ಸುಬ್ರಹ್ಮಣ್ಯನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಉಗಾಂಡಾ ಪ್ರಜೆ ರೇಮಂಡ್, ಲುಬೆಗಾ ಎಂಬ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ದೋಷಪೂರ್ಣ ಪಟ್ಟಿಯನ್ನು ಮತ್ತೊಮ್ಮೆ ಪರಿಶೀಲಿಸಿ ದೇವಸ್ಥಾನಗಳನ್ನು ರಕ್ಷಿಸಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ