ಪ್ರಗತಿವಾಹಿನಿ ಸುದ್ದಿ: ಬ್ಯಾಂಕ್ ಉದ್ಯೋಗಿಯನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡಪರ ಸಂಘಟನೆ ಅಧ್ಯಕ್ಷ ಸೇರಿದಂತೆ 6 ಜನರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಬೆಂಗಳೂರಿನಲ್ಲಿ ಬ್ಯಾಂಕ್ ಉದ್ಯೋಗಿ ಮಂಜುನಾಥ್ ಎಂಬುವವರನ್ನು ಅಪಹರಿಸಿ ಹಲ್ಲೆ ನಡೆಸಿದ ಆರೋಪದಲ್ಲಿ ಕನ್ನಡ ಪರ ಸಂಘಟನೆ ಅಧ್ಯಕ್ಷ ಪ್ರಕಾಶ್ ಅಲಿಯಾಸ್ ಕನ್ನಡ ಪ್ರಕಾಶ್, ಮಂಜುಳಾ, ಚಲಪತಿ ಸೇರಿದಂತೆ 6 ಜನರ ವಿರುದ್ಧ ಶಂಕರಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಜುನಾಹ್ ಮಂಜುಳಾ ಅವರಿಂದ 8 ಲಕ್ಷ ಹಣವನ್ನು ಸಾಲ ಪಡೆದಿದ್ದರಂತೆ ಆದರೆ ಎಷ್ಟು ಬಾರಿ ಕೇಳಿದರೂ ಹಣ ವಾಪಾಸ್ ಕೊಡದೇ ಮಂಜುನಾಥ್ ಸತಾಯಿಸುತ್ತಿದ್ದನಂತೆ. ಇದರಿಂದ ಮಂಜುಳಾ ಹಾಗೂ ಗ್ಯಂಗ್ ಕನ್ನಡಪರ ಸಂಘಟನೆಯ ಪ್ರಕಾಶ್ ಜೊತೆ ಸೇರಿ ಮಮ್ಜುನಾಥ್ ನನ್ನು ಕಿಡ್ನ್ಯಾಪ್ ಮಾಡಿ ಬಳಿಕ ಪ್ರಕಾಶ್ ಕಚೇರಿಯಲ್ಲಿ ಕೂಡಿಹಾಕಿ, ಥಳಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಹಣ, ಮನೆಯ ಕಾಗದ ಪತ್ರಗಳನ್ನು ಕಸಿದುಕೊಂಡಿದ್ದಾರೆ ಎಂದು ದೂರಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ