ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮನಿ ಡಬ್ಲಿಂಗ್ ಆಸೆಗೆ ಒಳಗಾಗಿ 1 ಕೋಟಿ ರೂಪಾಯಿ ದುರ್ಬಳಕೆ ಮಾಡಿಕೊಂಡ ಆರೋಪ ಹಿನ್ನೆಲೆಯಲ್ಲಿ ಪ್ರತಿಷ್ಠಿತ ಬ್ಯಾಂಕ್ ಮ್ಯಾನೇಜರ್ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬಂಧಿತರನ್ನು ಬೆಂಗಳೂರುನ ಸಿದ್ದಯ್ಯ ರಸ್ತೆಯಲ್ಲಿರುವ ಬ್ಯಾಂಕ್ ಆಫ್ ಬರೋಡಾದಲ್ಲಿ ಮ್ಯಾನೇಜರ್ ಆಗಿದ್ದ ಅರುಣ್, ಬ್ಯಾಂಕ್ ಸಹಾಯಕ ರಾಮಕೃಷ್ಣ, ಏಜೆಮ್ಟ್ ಬಸವರಾಜ್ ಹಾಗೂ ಇಮ್ತಿಯಾಜ್ ಎಂದು ಗುರುತಿಸಲಾಗಿದೆ.
ಅರುಣ್ ಕೆಲವೇ ಗಂತೆಗಳಲ್ಲಿ ಹಣ ಡಬಲ್ ಮಾಡಿಕೊಡುವ ಆಸೆಗೆ ಬಿದ್ದು, ಬ್ಯಾಂಕ್ ನಿಧಿಯಿಂದ ಜ.12ರಂದು ಒಂದು ಕೋಟಿ ರೂ ಹಣ ಡ್ರಾಮಾಡಿಕೊಂಡಿದ್ದ. ಬಳಿಕ ಈ ಹಣವನ್ನು ಏಜೆಂ ರಾಮಕೃಷ್ಣ ಜೊತೆ ಸೇರಿ ಡಬ್ಲಿಂಗ್ ಗ್ಯಾಂಗ್ ಗೆ ಹಣ ನೀಡಿದ್ದ. ಆದರೆ ಆ ಗ್ಯಾಂಗ್ ಹಣವನ್ನು ಡಬಲ್ ಮಾಡಿಕೊಡದೇ ವಂಚನೆ ಎಸಗಿತ್ತು. ಮೋಸ ಹೋಗಿದ್ದು ಗೊತ್ತಾಗುತ್ತಿದ್ದಂತೆಯೇ ಅರುಣ್ ಹಣ ತೆಗೆದುಕೊಂಡು ಹೋಗುತ್ತಿದ್ದಾಗ ಲೂಟಿಯಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದ. ತನಿಖೆ ನಡೆಸಿದ ಪೊಲೀಸರಿಗೆ ಸತ್ಯ ಬಯಲಾಗಿದೆ.
ಬೆಳಗಾವಿಯ ಬ್ಯಾಂಕ್ ಮ್ಯಾನೇಜರ್ ಸೈಕಲ್ ಸವಾರಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ