Kannada NewsKarnataka News

ಸಮಾಜದ ದಿಕ್ಕನ್ನು ಬದಲಿಸುವ ಶಕ್ತಿ ಬ್ಯಾಂಕುಗಳಿಗಿದೆ

ಸಮಾಜದ ದಿಕ್ಕನ್ನು ಬದಲಿಸುವ ಶಕ್ತಿ ಬ್ಯಾಂಕುಗಳಿಗಿದೆ

ಪ್ರಗತಿವಾಹಿನಿ ಸುದ್ದಿ, ಇಂಚಲ (ಜಿ. ಬೆಳಗಾವಿ)- ಸಮಾಜದ ದಿಕ್ಕನ್ನು ಬದಲಿಸುವ ಶಕ್ತಿ ಬ್ಯಾಂಕುಗಳಿಗಿದ್ದು, ಅದರಲ್ಲೂ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು ಕಳೆದ ೪೩ ವರ್ಷಗಳಿಂದ ಸಮಗ್ರ ಗ್ರಾಮೀಣ ಜನಜೀವನ ಮಟ್ಟವನ್ನು ಎತ್ತರಿಸುವಲ್ಲಿ ಮಹತ್ತರವಾದ ಕಾರ್ಯ ನಿರ್ವಹಿಸುತ್ತಲಿದೆ ಎಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಮಹಾಪ್ರಬಂಧಕ ಐ ಜಿ ಕುಮಾರ ಗೌಡ ಅಭಿಪ್ರಾಯ ಪಟ್ಟರು.

ಅವರು ಮಂಗಳವಾರ ಇಂಚಲ ಗ್ರಾಮದಲ್ಲಿನ (ಜಿ.ಬೆಳಗಾವಿ) ತಮ್ಮ ಶಾಖೆಯನ್ನು ಶ್ರೀ ಶಿವಯೋಗೀಶ್ವರ ಸಾಧು ಸಂಸ್ಥಾನ ಮಠದ ನೆಲ ಅಂತಸ್ತಿನ ಕಟ್ಟಡಕ್ಕೆ ಸ್ಥಳಾಂತರಿಸಿದ ಸಂದರ್ಭದಲ್ಲಿ ಅಲ್ಲಿನ ಶಾಖಾ ಸೇವೆಗಳನ್ನು ಸಾರ್ವಜನಿಕರಿಗೆ ಸಮರ್ಪಿಸಿ ಮಾತನಾಡಿದರು.

ಮೂಲಭೂತ ಬ್ಯಾಂಕಿಂಗ್ ವ್ಯವಹಾರಕ್ಕೆ ಮೂಲಾಧಾರವಗಿರುವ ಉಳಿತಾಯ ಖಾತೆಯನ್ನು ಪ್ರತಿಯೊಬ್ಬರೂ ಹೊಂದಲು ತಿಳಿಸಿದ ಅವರು, ಅದರ ಜೊತೆಗೆ ಸಾಮಾಜಿಕ ಭದ್ರತಾ ಯೋಜನೆಗಳಾದ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ, ಸುರಕ್ಷಾ ವಿಮಾ ಯೋಜನೆ ಮತ್ತು ಅಟಲ್ ಪೆನ್ಶನ್ ಯೋಜನೆಗಳಲ್ಲಿ ಪಾಲುಗೊಂಡು ಕುಟುಂಬಗಳಿಗೆ ಸುರಕ್ಷತೆ ಒದಗಿಸಿಕೊಳ್ಳಲು ತಿಳಿಸಿದರು.

ಮಹಿಳೆಯರ ಅಭ್ಯುದಯದಕ್ಕೆ ತಮ್ಮ ಬ್ಯಾಂಕು ಬದ್ಧವಾಗಿದ್ದು, ಮಹಿಳಾ ವರ್ಗದ ಆರ್ಥಿಕ ಸಬಲತೆಯನ್ನು ಗಮನದಲ್ಲಿರಿಸಿಕೊಂಡು ಬ್ಯಾಂಕು ಅನೇಕ ಯೋಜನೆಗಳನನ್ನು ಮಹಿಳೆಯರಿಗಾಗಿಯೇ ರೂಪಿಸಿದೆ ಎಂದೂ ಕುಮಾರ ಗೌಡ ತಿಳಿಸಿದರು.

ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಇಂಚಲ ಸಾಧು ಸಂಸ್ಥಾನ ಮಠದ ಡಾ; ಶಿವಾನಂದ ಭಾರತಿ ಮಹಾಸ್ವಾಮಿಗಳು ಮಾತನಾಡಿ, ಬದಲಾಗುತ್ತಿರುವ ಆರ್ಥಿಕ ವ್ಯವವಸ್ಥೆಯಲ್ಲಿ ಸಾಮಾಜಿಕ ಅಸಮಾನತೆ ಇರಕೂಡದು. ಈ ನಿಟ್ಟಿನಲ್ಲಿ ಜನಸಾಮಾನ್ಯರಿಗೆ ಆರ್ಥಿಕ ಶಿಕ್ಷಣ ನೀಡ ಬೇಕಾದ ಅನಿವಾರ್ಯತೆ ಇದೆ. ಆ ಜವಾಬ್ದಾರಿಯನ್ನು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು ಸಮರ್ಥವಾಗಿ ನಿರ್ವಹಿಸುತ್ತಲಿರುವುದು ಸಂತೋಷದ ವಿಷಯ ಎಂದರು.

ಮಲ್ಲಾಪುರ ಗಾಳೇಶ್ವರ ಮಠದ ಶ್ರೀ ಚಿದಾನಂದ ಸ್ವಾಮೀಜಿ, ಇಂಚಲ ಎಸ್ ಎಸ್ ಜಿ ಇ ಸೊಸೈಟಿಯ ಚೇರಮನ್ ಡಿ ಮಲ್ಲೂರ್ ಮುಖ್ಯ ಅತಿಥಿಗಳಾಗಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಪಕ ಪಿ ಡಿ ದೇಸಾಯಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಎಸ್ ಎನ್ ಕೊಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ಇಂಚಲ ಶಾಖಾ ವ್ಯವಸ್ಥಾಪಕ ವಿರೇಶ ಚುಳಕಿಮಠ ವಂದಿಸಿದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button