
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮೊದಲು ಎಲ್ಲಾ ಹುದ್ದೆಗೂ ರಾಜೀನಾಮೆ ನೀಡಲಿ ಎಂದು ಸ್ವಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಶಾಸಕ ಯತ್ನಾಳ್, ಮಾಜಿ ಸಿಎಂ ಯಡಿಯೂರಪ್ಪ, ಕುಟುಂಬ ಸದಸ್ಯರ ವಿರುದ್ಧ ಭ್ರಷ್ಟಾಚಾರ ಆರೋಪ ಪ್ರಕರಣ ದಾಖಲಾಗಿದೆ. ಎಫ್ ಐ ಆರ್ ದಾಖಲಿಸಿ ತನಿಖೆ ನಡೆಸುವಂತೆ ನ್ಯಾಯಾಲಯ ಆದೇಶ ನೀಡಿದೆ. ಹೀಗಿರುವಾಗ ಮೊದಲು ಯಡಿಯೂರಪ್ಪ ರಾಜೀನಾಮೆ ಕೊಡಬೇಕು. ಎಷ್ಟೇ ದೊಡ್ಡ ಹುಲಿ ಇದ್ರೂ ಕಾನೂನಿನ ಮುಂದೆ ಎಲ್ರೂ ಒಂದೇ ಎಂದು ಹೇಳಿದರು.
ಯಡ್ಯೂರಪ್ಪ ರಾಜಾಹುಲಿಯೇ ಆಗಿರಲಿ, ಆದರೆ ಆರೋಪ ಕೇಳಿಬಂದಗಾ ಎಲ್ಲಾ ಹುದ್ದೆಗೂ ರಾಜೀನಾಮೆ ಕೊಟ್ಟು ಆದರ್ಶ ಪಾಲಿಸಬೇಕು. ಈ ಹಿಂದೆ ಎಲ್.ಕೆ.ಅಡ್ವಾಣಿ ಮೇಲೆ ಆರೋಪ ಕೇಳಿಬಂದಿತ್ತು. ಆ ಸಂದರ್ಭದಲ್ಲಿ ಅವರು ಎಲ್ಲಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ರಾಜಾಹುಲಿ ಇರಲಿ ಯಾರೇ ಇರಲಿ ರಾಜೀನಾಮೆ ಮೊದಲು ಕೊಡಲಿ. ಅಡ್ವಾಣಿ ವಾಜಪೇಯಿ ಅವರಿಗಿಂತ ಇವರು ದೊಡ್ಡವರಾ? ರಾಜೀನಾಮೆ ಕೊಟ್ಟು ಎಲ್.ಕೆ.ಅಡ್ವಾಣಿ ಆದರ್ಶ ಪಾಲಿಸಲಿ ಎಂದು ಸಲೆ ನೀಡಿದರು.
ಇನ್ನು ಕಾಂಗ್ರೆಸ್ ನಾಯಕರಿಗೆ ಬಿಜೆಪಿ ಅಂದ್ರೆ ಭಯವಿಲ್ಲ, ಯತ್ನಾಳ್ ಅಂದ್ರೆ ಭಯ. ನಾನು ಸಿಎಂ ಆದ್ರೆ ಒಬ್ಬರು ಜೈಲಿಗೆ, ಮತ್ತೊಬ್ಬರು ಕಾಡಿಗೆ ಹೋಗಬೇಕಾಗುತ್ತಲ್ಲ ಎಂಬ ಭಯ ಅವರಿಗೆ ಎಂದು ಟಾಂಗ್ ನೀಡಿದರು.
ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಆರೋಗ್ಯ ಸಚಿವ ಸುಧಾಕರ್
https://pragati.taskdun.com/politics/vidhanasabheminister-dr-sudhakarhospitalized/