Latest

*ಸಚಿವ ಮುರುಗೇಶ್ ನಿರಾಣಿಗೆ ಸವಾಲು ಹಾಕಿದ ಶಾಸಕ ಯತ್ನಾಳ್*

ವಿಜಯಪುರ: ಸಚಿವ ಮುರುಗೇಶ್ ನಿರಾಣಿ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡುವಿನ ಜಟಾಪಟಿ ತಾರಕಕ್ಕೇರಿದ್ದು, ಮುರುಗೇಶ್ ನಿರಾಣಿಗೆ ತಾಕತ್ತಿದ್ದರೆ ಸಿಡಿ ಬಿಡುಗಡೆ ಮಾಡಲಿ ಎಂದು ಯತ್ನಾಳ್ ಸವಾಲು ಹಾಕಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಯತ್ನಾಳ್, ಎರಡು ಸಿಡಿ ಫ್ಯಾಕ್ಟರಿಗಳಿವೆ. ಕಾಂಗ್ರೆಸ್ ನಲ್ಲಿ ಒಂದು, ಬಿಜೆಪಿಯಲ್ಲಿ ಒಂದು. ನಿರಾಣಿ ಸಿಡಿ ಬಿಡುಗಡೆ ಮಾಡುವುದಾಗಿ ಹೆದರಿಸುತ್ತಿದ್ದಾರೆ. ತಾಕತ್ತಿದ್ದರೆ ಬಿಡುಗಡೆ ಮಾಡಲಿ. ನಿಜಕ್ಕೂ ಅವರಪ್ಪನಿಗೆ ಹುಟ್ಟಿದ್ದರೆ ನಿರಾಣಿಗೆ ಸಿಡಿ ಬಿಡುಗಡೆ ಮಾಡಲು ಹೇಳಿ ಎಂದು ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

ಯಾರ್ಯಾರ್ದೋ ಸಿಡಿ ಇಟ್ಟುಕೊಂಡು ಇವರು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಸಿಡಿ ಇಟ್ಟುಕೊಂಡೇ ಇವರು ಮಂತ್ರಿ ಆಗ್ತಾರೆ. ಸಿಡಿ ಬಿಡುಗಡೆ ಮಾಡುತ್ತೇನೆ ಎಂದು ಹೇಳಿವವರು. ನಾನು ಅಂತ ಕೆಲ್ಸ ಮಾಡಲ್ಲ ಎಂದರು.

ಚುನಾವಣೆ ಮೇಲೆ ಇದೆಲ್ಲ ಏನು ಪರಿಣಾಮ ಬೀರಲ್ಲ, ಜನರಿಗೆ ಎಲ್ಲವೂ ಗೊತ್ತಾಗಿದೆ. ಯಾರು ಒಳ್ಳೆಯವರು, ಯಾರು ಕೆಟ್ಟವರು, ಸಮಾಜದ ಪರವಾಗಿ ಯಾರಿದ್ದಾರೆ ಎಲ್ಲವೂ ಗೊತ್ತು. ವಿಜಯಪುರಕ್ಕೆ ನಿರಾಣಿ, ಬಿ.ವೈ.ವಿಜಯೇಂದ್ರ ಹಾಗೂ ಸತೀಶ್ ಜಾರಕಿಹೊಳಿ ದುಡ್ಡು ಕಳುಹಿಸಲಿದ್ದಾರೆ. ನಮ್ಮನ್ನು ಸೋಲಿಸಲು. ಆದರೆ ವಿಜಯಪುರದ ಜನ ಅವರಿಂದ ಹಣ ಪಡೆದು ನಮಗೆ ವೋಟು ಹಾಕುತ್ತಾರೆ ಎಂದು ಹೇಳಿದರು.

Home add -Advt

*ಉತ್ತಮ ಬೆಂಗಳೂರು ಹಾಗೂ ಬಿಯಾಂಡ್ ಬೆಂಗಳೂರು ಅಭಿವೃದ್ಧಿ ನಮ್ಮ ಯೋಜನೆ: ಸಿಎಂ ಬೊಮ್ಮಾಯಿ*

https://pragati.taskdun.com/deccan-herald-bangalore-2040-summitcm-basavaraj-bommaibrand-bangalore/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button