Kannada NewsLatestUncategorized

*ಸಚಿವ ಆರ್.ಅಶೋಕ್ ಗೆ ಸವಾಲು ಹಾಕಿದ ಶಾಸಕ ಯತ್ನಾಳ್*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ನಾವು ಯಾರಿಗೂ ಧಮ್ಕಿ ಹಾಕಿಲ್ಲ. ಡಿಸೆಂಬರ್ 29ರಂದು ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಘೋಷಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.

ಧಮ್ಕಿ ಹಾಕಿ ಮೀಸಲಾತಿ ಪಡೆಯುತ್ತಿದ್ದಾರೆ ಎಂಬ ಸಚಿವ ಆರ್.ಅಶೋಕ್ ಹೇಳಿಕೆಗೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಶಾಸಕ ಯತ್ನಾಳ್, ನಾವು ಯಾರಿಗೂ ಧಮ್ಕಿನೂ ಹಾಕಿಲ್ಲ ಏನೂ ಇಲ್ಲ. ನಾವು ನಮ್ಮ ಸಮಾಜದ ನ್ಯಾಯಯುತ ಬೇಡಿಕೆ ಕೇಳಿದ್ದೇವೆ. 29ರಂದು ಮುಖ್ಯಮಂತ್ರಿ ಬೊಮ್ಮಾಯಿ ಅವರು ಮೀಸಲಾತಿ ಕೊಡುವುದಾಗಿ ಹೇಳಿದ್ದಾರೆ ಎಂದು ಹೇಳಿದರು.

ಒಕ್ಕಲಿಗ ಸಮಾಜಕ್ಕೆ ಮೀಸಲಾತಿ ಬೇಡಿಕೆ ವಿಚಾರವಾಗಿ ಆರ್.ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಯತ್ನಾಳ್, ಆರ್.ಅಶೋಕ್ ಹಳೇ ಮೈಸೂರು ಭಾಗದಲ್ಲಿ 50 ಸೀಟ್ ಗೆಲ್ಲಿಸಿಕೊಂಡು ಬರಲಿ. 50 ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿ ತರಲಿ. ಆಗ ಮೀಸಲಾತಿ ಬಗ್ಗೆ ನೋಡೋಣ ಎಂದು ಸವಾಲು ಹಾಕಿದರು.

ದೇವೇಗೌಡರಂತೆ ಆರ್.ಅಶೋಕ್ ಕೂಡ 50 ಸೀಟ್ ಗೆಲ್ಲಿಸಿಕೊಂಡು ಬರಲಿ. ನಾವು ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯಿತರನ್ನು ಗೆಲ್ಲಿಸಿಕೊಂಡು ಬರುತ್ತೇವೆ. ಆರ್. ಅಶೋಕ್ ಬರಿ ಕಥೆ ಹೇಳಿದರೆ ಆಗಲ್ಲ, ಮೊದಲು ಗೆದ್ದು ತರಲಿ. ನಾನು ಯಾವುದೇ ಚಾಲೇಂಜ್ ಮಾಡುತ್ತಿಲ್ಲ, ಧಮ್ಕಿ ಎಂದು ಹೇಳಿದ್ದಕ್ಕೆ ಉತ್ತರ ಕೊಟ್ಟಿದ್ದೇನೆ ಅಷ್ಟೇ ಎಂದು ಟಾಂಗ್ ನೀಡಿದ್ದಾರೆ.

Home add -Advt

*ಮೀಸಲಾತಿ ಹೆಚ್ಚಿಸಿ ಎಂದ ಒಕ್ಕಲಿಗರು; ಏನಂದ್ರು ಸಿಎಂ? *

https://pragati.taskdun.com/okkaligareservationcm-basavaraj-bommaidr-ashwaththanarayana/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button