Kannada NewsKarnataka NewsLatest

*ಹೊರನಾಡಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ; ಅನ್ನಪೂರ್ಣೇಶ್ವರಿ ದೇವಿಯ ದರ್ಶನ ಪಡೆದ ಸಚಿವೆ*

ಪ್ರಗತಿವಾಹಿನಿ ಸುದ್ದಿ,ಹೊರನಾಡು : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಇಂದು ಕುಟುಂಬ ಸಮೇತ ಚಿಕ್ಕಮಗಳೂರಿನ ಕಳಸ ತಾಲೂಕಿನ ಪ್ರಸಿದ್ಧ ಶ್ರೀ ಕ್ಷೇತ್ರ ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ದೇವಸ್ಥಾನಕ್ಕೆ ಭೇಟಿ ನೀಡಿದರು.

ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಸಚಿವರಿಗೆ ಸ್ವಾಗತ ನೀಡಿ ಬರಮಾಡಿಕೊಂಡರು. ಕುಟುಂಬ ಸದಸ್ಯರೊಂದಿಗೆ ವಿಶೇಷ ಪೂಜೆ ಸಲ್ಲಿಸಿದ ಸಚಿವರು, ಶ್ರೀ ಕ್ಷೇತ್ರದಲ್ಲಿ ಮೊಮ್ಮಗಳಿಗೆ ಅನ್ನಪ್ರಾಶನ ಕೈಂಕರ್ಯ ನಡೆಸಿದರು.

Home add -Advt

ಕಳಸ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೇಣಿಕ್ ಮಸಣಗಿ, ರಾಜೇಂದ್ರ ಹೆಬ್ಬಾರ್, ಮೊಹಮದ್ ರಫಿಕ್, ವೀರೇಂದ್ರ, ‌ಸುಧಾಕರ್, ಸುಕುರು, ಶಂಸುದ್ದೀನ್, ಹೊರನಾಡು ಗ್ರಾಮ ಪಂಚಾಯತಿ ಅಧ್ಯಕ್ಷ ಮಧು ಪ್ರಸಾದ್ ಉಪಸ್ಥಿತರಿದ್ದರು.

Related Articles

Back to top button