
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಇಂದು ಒಂದೇ ದಿನ 216 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ಕರ್ನಾಟಕದಲ್ಲಿ ಸೋಂಕು ಪೀಡಿತರ ಸಂಖ್ಯೆ 1959ಕ್ಕೆ ಏರಿಕೆಯಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದ ಮಾಹಿತಿ ಪ್ರಕಾರ ಯಾದಗಿರಿ ಜಿಲ್ಲೆಯಲ್ಲಿ ಒಂದೇ ದಿನ 72 ಜನರಲ್ಲಿ ಕೊರೊನ ಸೋಂಕು ಕಾಣಿಸಿಕೊಂಡಿದೆ, ರಾಯಚೂರು 40, ಮಂಡ್ಯ 28, ಚಿಕ್ಕಬಳ್ಳಾಪುರ 26, ಗದಗ 15, ಧಾರವಾಡ 5, ಬೆಂಗಳೂರು 4, ಹಾಸನ 4, ದಾವಣಗೆರೆ 3, ದಕ್ಷಿಣ ಕನ್ನಡ 3, ಉಡುಪಿ 3, ಉತ್ತರ ಕನ್ನಡ 2, ಕಲಬುರಗಿ 1, ಬೆಳಗಾವಿ 1, ಬಳ್ಳಾರಿ, ಕೋಲಾರ, ಬೀದರ್ ತಲಾ ಮೂರು ಪ್ರಕರಣಗಳು ದಾಖಲಾಗಿವೆ.
ರಾಜ್ಯದಲ್ಲಿ 1959 ಕೊರೊನಾ ಸೋಂಕಿತರ ಪೈಕಿ ಈ ವರೆಗೆ 42 ಜನ ಬಲಿಯಾಗಿದ್ದು, 1307 ಜನರಿಗೆ ನಿಗದಿತ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 608 ಜನ ಗುಣ ಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
					
				
					
					
					
					
					
					
					

