*ಸ್ವಾಮೀಜಿಗಳಿಗೆ ವಿಷಪ್ರಾಶನ ಆರೋಪ: ಕರೆ ಮಾಡಿ ಕ್ಷಮೆ ಕೇಳಿದ ಬೆಲ್ಲದ್ ಎಂದ ಕಾಶಪ್ಪನವರ್*

ಪ್ರಗತಿವಾಹಿನಿ ಸುದ್ದಿ: ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಸ್ಥಾನದ ವಿವಾದದ ನಡುವೆಯೇ ಬಸವ ಜಯಮೃತ್ಯುಂಜಯ ಸ್ವಾಮೀಜಿ ಆಹಾರದಲ್ಲಿ ವಿಷ ಬೆರೆಸಲಾಗಿದೆ ಎಂದು ಆರೋಪಿಸಿದ್ದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್, ಹೊಸ ವಿವಾದ ಸೃಷ್ಟಿಸಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ವಿಜಯಾನಂದ ಕಾಶಪ್ಪನವರ್ ಪ್ರತಿಕ್ರಿಯೆ ನೀಡಿದ್ದಾರೆ.
ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯಾನಂದ ಕಾಶಪ್ಪನವರ್, ಸ್ವಾಮೀಜಿಗಳಿಗೆ ವಿಷಪ್ರಾಶನ ಆರೋಪ ಮಾಡಿದ್ದ ಅರವಿಂದ್ ಬೆಲ್ಲದ್ ಕರೆ ಮಾಡಿದ್ದರು. ತಪ್ಪು ಕಲ್ಪನೆಯಿಂದ ಹೇಳಿದ್ದಾಗಿ ಕ್ಷಮೆ ಕೇಳಿದ್ದಾರೆ ಎಂದು ತಿಳಿಸಿದ್ದಾರೆ.
ನನಗೆ ಕರೆ ಮಾಡಿ ಬೆಲ್ಲದ್ ಕ್ಷಮೆ ಕೋರಿದ್ದಾರೆ. ಶ್ರೀಗಳಿಗೆ ವಿಷಪ್ರಾಶನ ಅಂತಾ ತಪ್ಪು ಕಲ್ಪನೆಯಿಂದ ಹೇಳಿಬಿಟ್ಟೆ. ಕ್ಷಮೆ ಇರಲಿ ಎಂದಿದ್ದಾರೆ. ಬಾಯಿಗೆ ಬಂದಂಗೆ ಮಾತನಾಡಿದರೆ ಬಗ್ಗುತ್ತಾನೆ ಅಂದುಕೊಂಡಿರಬಹುದು. ಅರವಿಂದ್ ಬೆಲ್ಲದ್ ಅವರು ವಿರೋಧಪಕ್ಷದ ಉಪನಾಯಕ. ತನಿಖೆಗೆ ಒಂದು ಸಮಿತಿ ಮಾಡಿ ಎಂದು ಮೊನ್ನೆಯೇ ಹೇಳಿದ್ದೇನೆ. ನನ್ನ ಬಳಿ ಕೆಲಸ ಮಾಡುತ್ತಿದ್ದ ಜಾಫರ್ ಹಾಗೂ ಮಾಲತೇಶ್ ಇಬ್ಬರು ಹುಡುಗರನ್ನು ಮಠ ಕಾಯಲು ಹಾಕಿದ್ದೆ. ಸ್ವಾಮೀಜಿಗಳು ಬಾಗಲಕೋಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರಲ್ಲ, ಅಲ್ಲಿಗೆ ಹೋಗಿ ರಿಪೋರ್ಟ್ ತೆಗೆದುಕೊಳ್ಳಲಿ ಎಂದು ತಿರುಗೇತು ನೀಡಿದ್ದಾರೆ.