ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಭೇಟಿ ಬೆನ್ನಲ್ಲೇ ನಾಯಕತ್ವ ಬದಲಾವಣೆ ಚರ್ಚೆ ಇನ್ನಷ್ಟು ತಾರಕಕ್ಕೇರಿದೆ. ಸಿಎಂ ಬದಲಾವಣೆ ನಿಟ್ಟಿನಲ್ಲಿ ಇದೀಗ ಸ್ವಾಮೀಜಿಗಳು ಒತ್ತಡ ಹೇರಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅರುಣ್ ಸಿಂಗ್ ಭೇಟಿಯಾಗಿರುವುದು ಕುತೂಹಲವನ್ನು ಇಮ್ಮಡಿಗೊಳಿಸಿದೆ.
ಅರುಣ್ ಸಿಂಗ್ ಭೇಟಿ ಬಳಿಕ ಮಾತನಾಡಿದ ಸ್ವಾಮೀಜಿ, ಸಿಎಂ ಬದಲಾವಣೆ ವಿಚಾರಕ್ಕೂ ನಮಗೂ ಸಂಬಂಧವಿಲ್ಲ. ಆದರೆ ವರಿಷ್ಠರು ಆ ನಿಟ್ಟಿನಲ್ಲಿ ಪ್ರಯತ್ನಿಸಿದರೆ ನಾನು ಸಲಹೆ ಮಾತ್ರ ನೀಡಲು ಸಾಧ್ಯ. ರಾಜ್ಯದಲ್ಲಿ ಕೆಲ ನಾಯಕರಿಂದ ಹೇಳಿಕೆ ಬರುತ್ತಿರುವಾಗ ಸಮುದಾಯದ ಗುರುವಾಗಿ ಸುಮ್ಮನಿರುವುದುಸರಿಯಲ್ಲ. ಹಾಗಾಗಿ ಒಂದುವೇಳೆ ವರಿಷ್ಠರು ಸಿಎಂ ಬದಲಾವಣೆಗೆ ಚಿಂತನೆ ನಡೆಸಿದರೆ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಸ್ಥಾನ ನೀಡಬೇಕು ಎಂದು ಹೇಳಿದರು.
ಪಂಚಮಸಾಲಿ ಲಿಂಗಾಯತ ಸಮುದಾಯದಲ್ಲಿ ಸಮರ್ಥರಾದ ಪರ್ಯಾಯ ನಾಯಕರಿದ್ದಾರೆ. ಹಾಗಾಗಿ ಉತ್ತರ ಕರ್ನಾಟಕ ಭಾಗದ ಲಿಂಗಾಯತ ಸಮುದಾಯದವರನ್ನೇ ಸಿಎಂ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ