ಆ. 4 ರಂದು ಬಸವ ಪಂಚಮಿ ಚಿಂತನಗೋಷ್ಠಿ
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ: ಮಾನವ ಬಂಧುತ್ವ ವೇದಿಕೆ ಹಾಗೂ ವಿವಿಧ ಬಸವಪರ ಸಂಘಟನೆಗಳ ಆಶ್ರಯದಲ್ಲಿ ಇಲ್ಲಿನ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಆ. 4 ರಂದು ಬಸವ ಪಂಚಮಿ ಚಿಂತನಗೋಷ್ಠಿ ಹಮ್ಮಿಕೊಳ್ಳಲಾಗಿದೆ ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕರಾದ ರವೀಂದ್ರ ನಾಯ್ಕರ್ ತಿಳಿಸಿದರು.
ಮಾನವ ಬಂಧುತ್ವ ವೇದಿಕೆ ಸಂಸ್ಥಾಪಕ, ಶಾಸಕ ಸತೀಶ ಜಾರಕಿಹೊಳಿ ಅವರು ಚಿಂತನಗೋಷ್ಠಿ ಅಧ್ಯಕ್ಷತೆವಹಿಸಲಿದ್ದು, ಬೆಳಗಾವಿಯ ಫ್ರಭುಲಿಂಗ ಮಹಾಸ್ವಾಮಿಗಳು ಸಾನಿಧ್ಯವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಾಹಿತಿ, ವಿಚಾರವಾದಿ ವಿಶ್ವರಾಧ್ಯ ಸತ್ಯಂಪೇಟೆ, ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ್ ಅವರು ಭಾಗವಹಿಸಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ಪ್ರತಿರ‍್ಷ ನಾಗರ ಪಂಚಮಿಯಂದು ಬಸವ ಪಂಚಮಿಯನ್ನಾಗಿಸಿಕೊಂಡು ಬರುತ್ತಿರುವ ಮಾನವ ಬಂಧುತ್ವ ವೇದಿಕೆ ಹಬ್ಬದಂದು ವ್ರ‍್ಥವಾಗಿ ಪೊಲಾಗುವ ಹಾಲನ್ನು ಹಸಿವಿನಿಂದ ಬಳಲುವ ಮಕ್ಕಳಿಗೆ ಮತ್ತು ಬಡ ರೋಗಿಗಳಿಗೆ ನೀಡುವ ಮೂಲಕ ಈ ವರ್ಷ ವಿಶಿಷ್ಟವಾಗಿ ಆಚರಿಸಲು ಕರೆ ನೀಡಿದೆ”.
ನಾಡಿನೆಲ್ಲಡೆ ವೈಚಾರಿಕ ಚಿಂತನೆ ಬಿತ್ತುತ್ತಿರುವ ಮಾನವ ಬಂಧುತ್ವ ವೇದಿಕೆ ಜನರ ಮನದಲ್ಲಿನ ಮೌಢ್ಯ ಹೋಗಲಾಡಿಸಲು ಹಲವಾರು ಜಾಗೃತಿ ಕಾರ್ಯಕ್ರಮಗಳ ಮೂಲಕ ರಾಜ್ಯ, ದೇಶದಲ್ಲಿ ಹೆಸರುವಾಸಿಯಾಗಿದೆ.////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ