*ಬಸವ ಜಯಮೃತ್ಯುಂಜಯ ಸ್ವಾಮೀಜಿಗೆ ಬಿಗ್ ಶಾಕ್: ಪಂಚಮಸಾಲಿ ಪೀಠಾಧ್ಯಕ್ಷ ಸ್ಥಾನದಿಂದ ಉಚ್ಛಾಟನೆ*

ಪ್ರಗತಿವಾಹಿನಿ ಸುದ್ದಿ: ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಸ್ಥಾನ ವಿಚಾರವಾಗಿ ನಡೆಯುತ್ತಿದ್ದ ಜಟಾಪಟಿಯಲ್ಲಿ ಪಂಚಮಸಾಲಿ ಪೀಠಾದ್ಯಕ್ಷ ಸ್ಥಾನದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಉಚ್ಛಾಟನೆ ಮಾಡಲಾಗಿದೆ.
ಕೂಡಲಸಂಗಮ ಪಂಚಮಸಾಲಿ ಪೀಠದಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪಂಚಮಸಾಲಿ ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್, ಕಾರ್ಯದರ್ಶಿ ನೀಲಕಂಠ ಅಸೂಟಿ ಸೇರಿದಂತೆ ಹಲವು ಸದಸ್ಯರು ಸ್ವಾಮೀಜಿ ಉಚ್ಛಾಟನೆಗೆ ನಿರ್ಧಾರ ಕೈಗೊಂಡಿದ್ದಾರೆ.
ದಾವಣಗೆರೆ, ಬೆಳಗಾವಿ ಸೇರಿದಂತೆ ಇತರೆಡೆಗಳಲ್ಲಿ ಆಸ್ತಿ ಮಾಡಿದ್ದಾರೆ. ಟ್ರಸ್ಟ್ ಸದಸ್ಯರ ಮಾತುಗಳಿಗೆ ಬೆಲೆಕೊಡುತ್ತಿಲ್ಲ ಹಲವಾರು ಕಾರಣಗಳಿಂದ ಅವರನ್ನು ಉಚ್ಛಾಟಿಸಲು ತೀರ್ಮಾನ ಕೈಗೊಂಡು ಉಚ್ಛಾಟನೆ ಮಾಡಲಾಗಿದೆ ಎಂದು ಸಭೆಯಲ್ಲಿ ಪಾಲ್ಗೊಂಡ ಮುಖಂಡರು ತಿಳಿಸಿದ್ದಾರೆ.
ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಅಧ್ಯಕ್ಷರಾದ ವಿಜಯಾನಂದ್ ಕಾಶಪ್ಪನವರ ಹೇಳಿಕೆ
ಸ್ವಾಮೀಜಿಗಳು ಸನಾತನ ಧರ್ಮ ಪ್ರಚಾರ ಮಾಡಲು ಹೊರಟಿದ್ದಾರೆ
ನಾವು ಬಸವ ತತ್ವ ಆಧಾರ ಜೀವನ ಮಾಡುತ್ತಿದ್ದೇವೆ
ಆದರೆ ಸ್ವಾಮಿಗಳು ನಮ್ಮ ಸಮಾಜದ ಜನರಿಗೆ ಜಾತಿ ಜನಗಣತಿ ಯಲ್ಲಿ ಹಿಂದೂ ಎಂದು ಬರೆಸುವಂತೆ ಹೇಳುತ್ತಿದ್ದಾರೆ
ನಮ್ಮ ಟ್ರಸ್ಟಿನ ಸಭೆಯಲ್ಲಿ ಜಾತಿ ಕಾಲಂ ನಲ್ಲಿ ಲಿಂಗಾಯತ ಪಂಚಮಸಾಲಿ ಎಂದು ಬರೆಸುವಂತೆ ನಿರ್ಣಯ ಕೈಗೊಂಡಿದ್ದಾರೆ.
ಇನ್ನು ಸ್ವಾಮೀಜಿಗಳು ತಮ್ಮ ವಿವೇಚನೆ ಯಂತೆ ಸ್ವಂತ ಆಸ್ತಿ ಮಾಡಿದ್ದಾರೆ
ಇನ್ನು ಹತ್ತು ಹಲವಾರು ಗಂಭೀರ ಆರೋಪಗ ಳು ಸ್ವಾಮೀಜಿ ಮೇಲೆ ಕಂಡು ಬಂದಿರುವದರಿಂದ ಅವರನ್ನು ಮಠದಿಂದ ಉಚ್ಚಾಟನೆ ಮಾಡಲಾಗಿದೆ.
ಜೊತೆಗೆ ನಾಳೆಯಿಂದ ಇಲ್ಲಿ ದಾಸೋಹ, ಸಮುದಾಯದ ಕಾರ್ಯಗಳಿಗೆ ಅನುಕೂಲ ಆಗುವಂತೆ ಕಲ್ಯಾಣ ಮಂಟಪ ನಿರ್ಮಿಸಿ ಮುಂಬರುವ ದಿನಗಳಲ್ಲಿ ಪೀಠಕ್ಕೆ ಮತ್ತೊಬ್ಬ ಶ್ರೀ ಗಳನ್ನು ನೇಮಿಸಲಾಗುವುದು ಎಂದು ಶಾಸಕ ವಿಜಯಾನಂದ್ ಕಾಶಪ್ಪನವರ್ ತಿಳಿಸಿದ್ದಾರೆ. ಕೂಡಲಸಂಗಮಲಿಂಗಾಯತ ಪಂಚಮಸಾಲಿ ಪೀಠ
ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ಕೂಡಲಸಂಗಮ ವತಿಯಿಂದ ಸಭೆ
ಸಭೆಯಲ್ಲಿ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಹುನಗುಂದ ಕ್ಷೇತ್ರದ ಶಾಸಕರಾದ ವಿಜಯಾನಂದ್ ಕಾಶಪ್ಪನವರ, ನೀಲಕಂಠ ಅಸೂಟಿ, ಮಾಜಿ ವಿಧಾನ ಪರಿಷತ್ ಸದಸ್ಯ ಎಂ ಪಿ ನಾಡಗೌಡ, ಸೇರಿದಂತೆ ಹಲವು ಟ್ರಸ್ಟಿನ ಮುಖಂಡರು ಭಾಗಿ
ಕಾರ್ಯಕಾರಿಣಿ ಹಾಗೂ ಮುಖಂಡರ ಸಭೆ
ಸಮಾಜದಲ್ಲಿ ಇತ್ತೀಚಿಗೆ ನಡೆದ ಬೆಳವಣಿಗೆಗಳ ಬಗ್ಗೆ ವಿಸ್ತೃತ ಚರ್ಚೆ
ಇತ್ತೀಚಿಗೆ ಕೆಲವು ದಿನಗಳಿಂದ ನಡೆದ ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು
ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನು ಮಠದ ಹೊರ ಹಾಕಿ ಮಠಕ್ಕೆ ಬೀಗ ಹಾಕಿದ ಪ್ರಸಂಗ ಕುರಿತಾಗಿ ಚರ್ಚೆ.
ಸಂಘದ ಪ್ರಧಾನ ಕಾರ್ಯದರ್ಶಿ ನೀಲಕಂಠ ಅಸೂಟಿ ಮಾತನಾಡಿ ಸ್ವಾಮೀಜಿಗಳು ಇತ್ತೀಚಿಗೆ ಸಮಾಜದ ಸಂಘಟನೆ ಬಿಟ್ಟು ಬೇರೆ ಬೇರೆಯವರ ತಾಳಕ್ಕೆ ಕುಣಿಯುತ್ತಿದ್ದಾರೆ
ನಮ್ಮ ಸಮಾಜದ ಪೀಠಕ್ಕೆ ಬರುವವರು ಅವರ ಹೆಸರಲ್ಲಿ. ಯಾವುದೇ ಸ್ವಂತ ಆಸ್ತಿ ಹೊಂದಿರಬಾರದು
ಜೊತೆಗೆ ನಿನ್ನೆ ನಡೆದ ಸಭೆಯಲ್ಲಿ ನಡೆದ ಜಾತಿಜನಗಣತಿ ಸಭೆಯಲ್ಲಿ ಹಿಂದೂ ಎಂದು ಬರೆಸಿ ಎಂದು ಹೇಳಿರುವುದು ಬಹಳ ಖಂಡನೀಯ
ನಮ್ಮ ಸಮಾಜಕ್ಕೆ 2A ಮೀಸಲಾತಿ ಹೋರಾಟಕ್ಕೆ ಹೋರಾಡುತ್ತಿರುವ ಈ ಸಂದರ್ಭದಲ್ಲಿ ಹಿಂದೂ ಅಂತ ಬರೆಸಿದರೆ ಮೀಸಲಾತಿ ಬರುವದಿಲ್ಲ
ಹೀಗಾಗಿ ನಮ್ಮ ಸಮಾಜದ ಬಗ್ಗೆ ಕಾಳಜಿ ವಹಿಸದೇ ಇನ್ಯಾರೋ ಒತ್ತಡಕ್ಕೆ ಮಣಿದು ಮಾತನಾಡಿರುವ ಸ್ವಾಮಿಗಳು ನಮಗೆಲ್ಲ. ಬೇಡ ಎಂದು ಟ್ರಸ್ಟಿನ ಸಭೆಯಲ್ಲಿ ನಿರ್ಣಯ ಕೈಗೊಂಡು ಈ ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು
ಆದರೆ ನಮ್ಮ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಗಳು ಪೀಠದ ಉದ್ಧಾರಕ್ಕೆ ಮುಂದಾಗದೆ ತಮ್ಮ ಸ್ವಂತ ಹೆಸರಲ್ಲಿ ಟ್ರಸ್ಟ್, ಹಾಗೂ ಹಲವು ಅಸ್ತಿಗಳನ್ನ ಹೊಂದಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಹಲವು ಬಾರಿ ಟ್ರಸ್ಟ್ ವತಿಯಿಂದ ನೋಟೀಸ್ ನೀಡಿದ್ದರೂ ಯಾವುದೇ ರೀತಿಯ ಸ್ಪಂದನೆ ಮಾಡದೇ ಇರುವದರಿಂದ ಅವರನ್ನು ಈ ಟ್ರಸ್ಟ್ ನಿಂದ ತೆಗೆದು ಹಾಕಲು
ನಿರ್ಣಯ ಮಾಡಿದೆ
ಅದನ್ನು ಶಾಸಕರು ಹಾಗೂ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಅಧ್ಯಕ್ಷರಾದ ವಿಜಯಾನಂದ್ ಕಾಶಪ್ಪನವರ ಅವರಿಗೆ ನೀಡಲಾಗಿದೆ
ಅವರ ಅಂತಿಮ ನಿರ್ಣಯ ಏನು ತೆಗೆದುಕೊಳ್ಳುತ್ತಾರೋ ಅದಕ್ಕೆ ಸಮಾಜದ ಎಲ್ಲರೂ ಬದ್ಧರಾಗಿದ್ದಾರೆ ಎಂದು ತಿಳಿಸಿದರು.