ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಚಿಕ್ಕೋಡಿ ತಾಲೂಕಿನ ಜನವಾಡ ಗ್ರಾಮದಲ್ಲಿ ಬಸವಜ್ಯೋತಿ ವ್ಯಾಯಾಮ ಶಾಲೆ (ಫಿಟ್ನೆಸ್ ಕ್ಲಬ್)ಯನ್ನು ಬಸವಜ್ಯೋತಿ ಯೂಥ್ ಫೌಂಡೇಶನ್ ಅಧ್ಯಕ್ಷರಾದ ಬಸವಪ್ರಸಾದ ಜೊಲ್ಲೆ ಉದ್ಘಾಟಿಸಿದರು.
ಬಳಿಕ ಮುಜರಾಯಿ ಹಜ್ ಹಾಗೂ ವಕ್ಫ್ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ ವಿಶೇಷ ಪ್ರಯತ್ನದಿಂದ ಶ್ರೀ ಮಹಾದೇವ ಮಂದಿರ ಮಠದ ಜೀರ್ಣೋದ್ಧಾರಕ್ಕಾಗಿ 10 ಲಕ್ಷ ರೂ ಆದೇಶ ಪತ್ರ ನೀಡಿದರು. ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ 40 ಫಲಾನುಭವಿ ಮಹಿಳೆಯರಿಗೆ ಉಚಿತ ಗ್ಯಾಸ್ ವಿತರಿಸಿದರು. ಬಳಿಕ ರಾಜು ಘಾಟಗೆ ಫಲಾನುಭವಿಗೆ ತ್ರಿಚಕ್ರ ವಾಹನವನ್ನು ವಿತರಿಸಿದರು.
ಗ್ರಾಮದ ಬೂತ್ ನಂ 1 ರ ಅಧ್ಯಕ್ಷರಾದ ಅಣ್ಣಾಸಾಬ ಘಾಟಗೆ, ಬೂತ್ ನಂ 2 ರ ಅಧ್ಯಕ್ಷರಾದ ಸಂಜಯ ರವಳುಕೇದಾರಿ, 3 ರ ಅಧ್ಯಕ್ಷರಾದ ಕುಮಾರ ಪಾಟೀಲ, 4 ರ ಅಧ್ಯಕ್ಷರಾದ ಮಲ್ಲಪ್ಪ ಮುಧಾಳೆ ಅವರ ಮನೆಗೆ ನಾಮಫಲಕ ಅಳವಡಿಸಿದರು.
ಈ ವೇಳೆ ಮಾತನಾಡಿದ ಬಸವ ಪ್ರಸಾದ ಜೊಲ್ಲೆ, ವ್ಯಾಯಾಮವು ದೈಹಿಕ ಅರ್ಹತೆ ಮತ್ತು ಒಟ್ಟಾರೆ ಆರೋಗ್ಯ ಹಾಗೂ ಕ್ಷೇಮವನ್ನು ಹೆಚ್ಚಿಸುವ ಅಥವಾ ಕಾಪಾಡುವ ಯಾವುದೇ ಶಾರೀರಿಕ ಚಟುವಟಿಕೆ. ಸ್ನಾಯುಗಳು ಹಾಗೂ ಹೃದಯನಾಳ ವ್ಯವಸ್ಥೆಯನ್ನು ಬಲಪಡಿಸುವುದು, ಕ್ರೀಡಾ ಕೌಶಲಗಳನ್ನು ಅಭಿವೃದ್ಧಿಗೊಳಿಸುವುದು, ತೂಕ ಇಳಿಸುವಿಕೆ ಅಥವಾ ನಿರ್ವಹಣೆ, ಮತ್ತು ಕೇವಲ ಸಂತೋಷಕ್ಕೆ ಒಳಗೊಂಡAತೆ, ಅದನ್ನು ವಿವಿಧ ಕಾರಣಗಳಿಗಾಗಿ ಮಾಡಲಾಗುತ್ತದೆ. ನಿತ್ಯಗಟ್ಟಳೆಯ ಹಾಗೂ ನಿಯಮಿತ ನಮ್ಮ ಆರೋಗ್ಯ ಸದೃಢವಾಗಿರಲು ಪೌಷ್ಠಿಕ ಆಹಾರದ ಜತೆಗೆ ವ್ಯಾಯಾಮ ಕೂಡ ಅಷ್ಟೇ ಮುಖ್ಯ. ಪ್ರತಿದಿನ ವ್ಯಾಯಾಮ ಮಾಡುವುದರಿಂದ ಉತ್ತಮ ಆರೋಗ್ಯ ನಮ್ಮದಾಗಿಸಿಕೊಳ್ಳಬಹುದು ಎಂದರು.
ಈ ಸಂದರ್ಭದಲ್ಲಿ ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾದ ರಾಮಗೊಂಡ ಪಾಟೀಲ, ರಮೇಶ ಪಾಟೀಲ, ಅಣ್ಣಗೌಡ ಪಾಟೀಲ, ಉದಯಕುಮಾರ ಪಾಟೀಲ, ಪಿರಗೌಡ ಮಗದುಮ್ಮ, ಗ್ರಾಮ ಪಂಚಾಯತ ಸದಸ್ಯರು,ಗ್ರಾಮಸ್ಥರು, ಫಲಾನುಭವಿಗಳು, ಹಾಗೂ ನೂರಾರು ಯುವಕರು ಉಪಸ್ಥಿತರಿದ್ದರು.
ಹೊಸ ವರ್ಷಚರಣೆ : 6 ಗಂಟೆಯಿಂದಲೇ ಕಠಿಣ ನಿರ್ಬಂಧ, ಹುಷಾರ್ ಎಂದ ಗೃಹ ಸಚಿವ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ