Politics
*ಯುದ್ಧ ಅಂದ್ರೆ ಬಂದೂಕು ಹಿಡಿದು ಮತಾಡ್ತಾರಾ? ಅವರ ವಾರ್ ಗೆ ರಾಜ್ಯದ ಜನರೇ ತೀರ್ಮಾನಿಸುತ್ತಾರೆ ಎಂದ ಗೃಹ ಸಚಿವ*

ಪ್ರಗತಿವಾಹಿನಿ ಸುದ್ದಿ: ಇಂದಿನಿಂದ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ನನ್ನ ಯುದ್ಧ ಎಂದು ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಟಾಂಗ್ ನೀಡಿದ್ದಾರೆ.
ಸರ್ಕಾರದ ವಿರುದ್ಧ ಯುದ್ಧ ಅಂದ್ರೇನು? ಬಂದೂಕು ಹಿಡಿದು ಯುದ್ಧ ಮಾಡ್ತಾರಾ? ಯುದ್ಧ ಅಂದ್ರೆ ಟೀಕೆ ಟಿಪ್ಪಣಿ ಅಂತಾ ಅರ್ಥ. ಅವರು ಕೇಂದ್ರ ಸಚಿವರಿದ್ದಾರೆ. ಮಾತನಾಡುತ್ತಾರೆ. ಮಾತನಾಡಲಿ, ಸರ್ಕಾರದ ವಿರುದ್ಧ ಅವರು ಏನು ದಾಖಲೆ ಬಿಡುಗಡೆ ಮಡ್ತಾರೆ ಮಾಡಲಿ ಎಂದರು.
ಸರ್ಕಾರವಿದೆ. ಕಾನೂನು ಅದರದ್ದೇ ರೀತಿನಲ್ಲಿ ಕ್ರಮ ಕೈಗೊಳ್ಳುತ್ತದೆ. ಅನಗತ್ಯವಾಗಿ ಕಾಂಗ್ರೆಸ್ ನಾಯಕರ ವಿರುದ್ಧ ಮಾತನಾಡುವುದು ಬೇಡ. ರಾಜ್ಯದ ಜನರು ಅವರ ವಾರ್ ಬಗ್ಗೆ ತೀರ್ಮಾನ ಮಾಡ್ತಾರೆ ಎಂದು ಹೇಳಿದರು.