Karnataka News

ನಿವೃತ್ತ ಅಧಿಕಾರಿಯ ಮನೆಯಲ್ಲಿ ಕೋಟ್ಯಾಂತರ ಮೌಲ್ಯದ ಚಿನ್ನ, ನಗದು ಪತ್ತೆ

 ಪ್ರಗತಿ ವಾಹಿನಿ ಸುದ್ದಿ, ಭುವನೇಶ್ವರ: ಭುವನೇಶ್ವರದಲ್ಲಿ ರೈಲ್ವೇ ಇಲಾಖೆಯ ನಿವೃತ್ತ ಅಧಿಕಾರಿಯೊಬ್ಬರ ಮನೆಯಲ್ಲಿ ಸಿಬಿಐ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ 17 ಕೆಜಿ ಚಿನ್ನ, 1.57 ಕೋಟಿ ರೂ. ನಗದು ಹಣ ಪತ್ತೆಯಾಗಿದೆ.

ಭಾರತೀಯ ರೈಲ್ವೇ ಸಂಚಾರ ಸೇವಾ ವಿಭಾಗದ ಪ್ರಧಾನ ಮುಖ್ಯ ವ್ಯವಸ್ಥಾಪಕ ಪ್ರಮೋದ ಕುಮಾರ್ ಜೇನಾ ಅವರ ಮನೆಯಲ್ಲಿ ಚಿನ್ನ ಮತ್ತು ನಗದು ಹಣವನ್ನು ಸಿಬಿಐ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ಈ ಅಧಿಕಾರಿ ಕಳೆದ 2022ರ ನವೆಂಬರ್ ತಿಂಗಳಲ್ಲಿ ನಿವೃತ್ತಿ ಹೊಂದಿದ್ದರು.

ಸಿಬಿಐ ಅಧಿಕಾರಿಗಳ ಕಾರ್ಯಾಚರಣೆಯ ವೇಳೆ 8-10 ಕೋಟಿ ಅಂದಾಜು ಮೌಲ್ಯದ ಒಟ್ಟು 17 ಕೆಜಿ ಚಿನ್ನ, 2.25 ಕೋಟಿ ಮೌಲ್ಯದ ಬ್ಯಾಂಕ್ ಮತ್ತು ಅಂಚೆ ಠೇವಣಿ ರಸೀದಿಗಳು ಅಲ್ಲದೇ 1.57 ಕೋಟಿ ನಗದು ಮತ್ತು ಕೆಲ ಆಸ್ತಿ ದಾಖಲೆಗಳು ಲಭ್ಯವಾಗಿವೆ.

Home add -Advt

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ

https://pragati.taskdun.com/distribution-of-laptops-to-students-in-visvesvaraya-technical-university/

Related Articles

Back to top button