Latest

ಭಾರತದ ಅಸ್ಮಿತೆಗೆ ಧಕ್ಕೆ ತರುವ ಪಿಎಫ್ಐ ಸಂಚು ಬಯಲು :ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಭಾರತದ ಅಸ್ಮಿತೆಗೆ ಧಕ್ಕೆ ತರುವ ಪಿಎಫ್ಐ ಸಂಚು ಬಯಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ರಾಮಮಂದಿರ ಸ್ಫೋಟ ಮಾಡುವುದಕ್ಕೆ ಪಿಎಫ್ಐ ಸಂಚು ಮಾಡಿತ್ತು ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಪಿಎಫ್ಐ ಸಂಘಟನೆ ಒಂದು ದೇಶದ್ರೋಹಿ ಸಂಘಟನೆ. ದೇಶವ್ಯಾಪಿ ವಿಧ್ವಂಸಕ ಹಾಗೂ ಭಯೋತ್ಪಾದನೆ ಕೃತ್ಯಗಳನ್ನು ಮಾಡುತ್ತಿದೆ. ಈ ಹಿಂದೆ ಮುಂಬಯಿಯಲ್ಲಿ ಸರಣಿ ಬಾಂಬ್ ಸ್ಪೋಟ ಸಂಭವಿಸಿದಂತೆ, ಏಕಕಾಲದಲ್ಲಿ ವಿವಿಧ ಕಡೆ ದುಷ್ಕೃತ್ಯಗಳನ್ನು ಮಾಡುವ ಅವರ ಷಡ್ಯಂತ್ರ ಈಗಾಗಲೇ ಬಯಲಾಗಿದೆ. ಭಾರತದ ಅಸ್ಮಿತೆಯನ್ನು ಪ್ರತಿನಿಧಿಸುವಂತಹ ಕಟ್ಟಡಗಳನ್ನು ಧ್ವಂಸ ಮಾಡುವ ಮೂಲಕ ಭಾರತದ ಅಸ್ಮಿತೆಗೆ ಧಕ್ಕೆ ತರುವುದು ಅವರ ಹುನ್ನಾರವಾಗಿದೆ ಎಂದರು.

ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯುತ್ತಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಈ ವಿಚಾರವನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಎಲ್ಲ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ ಎಂದರು.

 ಅಯೋಧ್ಯೆ ರಾಮಮಂದಿರ ಸ್ಫೋಟಕ್ಕೆ PFI ಸಂಚು

Home add -Advt

https://pragati.taskdun.com/latest/ayodhya-ramamandirablast-planepfi4-arresednia/

ಸಿದ್ದರಾಮಯ್ಯ, ಬಿಜೆಪಿಗೆ ಕ್ಷಮೆ ಕೇಳಿದ ಜಿಟಿಡಿ ಮಹತ್ವದ ಘೋಷಣೆ

Related Articles

Back to top button