Karnataka News

*ಲೋಕಾಯುಕ್ತ ದಾಳಿ ವೇಳೆ ಐವರ ಬಂಧನ: ಸಿಎಂ ಪದಕ ಪಡೆದ ಇನ್ಸ್‌ಪೆಕ್ಟ‌ರ್ ಪರಾರಿ*

ಪ್ರಗತಿವಾಹಿನಿ ಸುದ್ದಿ: ಲೋಕಾಯುಕ್ತ ದಾಳಿ ನಡೆಸಿ ಇಬ್ಬರು ಪೊಲೀಸ್ ಸೇರಿದಂತೆ ಐವರನ್ನು ಬಂಧಿಸಿದೆ. ಕಳೆದ ಸಾಲಿನ ಮುಖ್ಯಮಂತ್ರಿ ಪದಕ ಪಡೆದಿದ್ದ ಇನ್ಸ್ ಪೆಕ್ಟರ್ ಪ್ರಕರಣದ ಪ್ರಮುಖ ಆರೋಪಿ. ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟ‌ರ್ ಕುಮಾರ್ ಲೋಕಾಯುಕ್ತ ಬಲೆಗೆ ಬೀಳುತ್ತಿದ್ದಂತೆ ಪರಾರಿಯಾಗಿದ್ದಾರೆ. 

ಚನ್ನೇಗೌಡ ಎಂಬ ಗುತ್ತಿಗೆದಾರರ ಬಳಿ ಮನೆಯನ್ನು ಕೊಳ್ಳಲು ಮುಂದಾಗಿದ್ದ ಕುಮಾರ್ ಅವರೊಡನೆ ಕರಾರು ಮಾಡಿಕೊಂಡಿದ್ದ. ಆದರೆ 4 ಕೋಟಿ ರೂ. ಮೌಲ್ಯದ ಮನೆಯನ್ನು ಕಡಿಮೆ ಹಣಕ್ಕೆ ನೋಂದಣಿ ಮಾಡಿಸಿಕೊಡುವಂತೆ ಪೀಡಿಸಿ ತನ್ನ ಸಿಬ್ಬಂದಿಗಳೊಂದಿಗೆ ಬೆದರಿಕೆ ಒಡ್ಡಿದ್ದರು. ಇದರಿಂದ ರೋಸಿಹೋಗಿದ್ದ ಚನ್ನೇಗೌಡ ಲೋಕಾಯುಕ್ತ ಬಳಿ ದೂರು ದಾಖಲಿಸಿದ್ದರು.

Home add -Advt

ನಾಗರಬಾವಿಯ ಬಳಿಯಿರುವ ಖಾಸಗಿ ಹೋಟೆಲ್ ಒಂದರಲ್ಲಿ ಇವರೆಲ್ಲಾ ಕಲೆತಿರುವಾಗ ಧಿಡೀರ್ ದಾಳಿ ನಡೆಸಿದ ಲೋಕಾಯುಕ್ತ, ಐವರನ್ನು ಬಂಧಿಸಿ ವಿಚಾರಣೆಗೆ ವಶಕ್ಕೆ ಪಡೆದಿದ್ದಾರೆ. ಪರಾರಿಯಾಗಿರುವ ಕುಮಾರ್ ಗಾಗಿ ಪತ್ತೆ ಕಾರ್ಯ ಆರಂಭವಾಗಿದೆ.

https://pragativahini.com/policecm-medalsiddara

Related Articles

Back to top button