*ಶಾಲಾ ಮಕ್ಕಳಿಗೆ ಕಿವಿಮಾತು ಹೇಳಿದ ಬಸವರಾಜ ಬೊಮ್ಮಾಯಿ: ನೆಟ್ಟಿಗರಿಂದ ಟ್ರೋಲ್*
ಪ್ರಗತಿವಾಹಿನಿ ಸುದ್ದಿ: ಚುನಾವಣಾ ಪ್ರಚಾರದ ವೇಳೆ ಸಂಸದ ಬಸವರಾಜ್ ಬೊಮ್ಮಾಯಿ ಮಾರ್ಗ ಮಧ್ಯೆ ಹೋಗುವಾಗ ನಡೆದುಕೊಂಡು ಹೊರಟ್ಟಿದ್ದ ಶಾಲಾ ಮಕ್ಕಳನ್ನು ಮಾತಾಡಿಸುತ್ತಾರೆ. ಬಳಿಕ ಅಲ್ಲಿಂದ ತೆರಳುತ್ತಾರೆ. ಈ ವಿಚಾರವಾಗಿ ಸಾಮಾಜೀಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಶಿಗ್ಗಾವಿಯ ಉಪಚುನಾವಣೆ ಹಿನ್ನೆಲೆಯಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಅವರು ತಮ್ಮ ಪುತ್ರ ಭರತ್ ಬೊಮ್ಮಾಯಿಯ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಮಾರ್ಗ ಮಧ್ಯೆ ಸರ್ಕಾರಿ ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿಗಳನ್ನು ಮಾತನಾಡಿಸಿ, ಚೆನ್ನಾಗಿ ಓದಿ ಎಂದು ಕಿವಿಮಾತು ಹೇಳಿದ್ದಾರೆ. ಸಾಲಿಗ್ ಹೋಗಾಕ್ ಬಸ್ ಇಲ್ರೀ ಸರ್.. ಇನ್ನು ಮೂರು ಕಿಲೋ ಮೀಟರ್ ನಡೆದುಕೊಂಡೇ ಹೋಗಬೇಕು ಎಂದು ಮಕ್ಕಳು ತಮ್ಮ ಅಳಲನ್ನು ತೋಡಿಕೊಂಡರು. ನಡೆದರೆ ಆರೋಗ್ಯಕ್ಕೆ ಒಳ್ಳೆಯದು, ನಾನು ಚಿಕ್ಕವನಿದ್ದಾಗ ನಡೆದುಕೊಂಡೇ ಹೋಗುತ್ತಿದ್ದೆ ಎಂದು ಬೊಮ್ಮಾಯಿ ಹೇಳಿದರು. ಅವರ ಮಕ್ಕಳೊಂದಿಗಿನ ಈ ಸಂವಾದಕ್ಕೆ ಕೆಲವರು ಟೀಕಿಸಿದ್ದಾರೆ.
ನೀವೇ ಮಕ್ಕಳನ್ನು ಡ್ರಾಪ್ ಮಾಡಬಹುದಿತ್ತಲ್ವಾ? ಬರೀ ಕಾರಿನ ಗಾಜು ಇಳಿಸಿ. ಮಾತನಾಡಿದ್ದೀರಿ. ಮಕ್ಕಳಿಗೆ ಏನಾದರೂ ತಿನ್ನಲು ತಿಂಡಿ ಕೊಡಬಾರದಿತ್ತಾ? .. ಬರೀ ಶೋ ಅಪ್ ಸಿಎಂ, ಸೀಟ್ ಬೆಲ್ಟ್ ಹಾಕಬೇಕಲ್ಲವೇ. ಹೀಗೆ ನಾನಾ ರೀತಿಯಲ್ಲಿ ನೆಟ್ಟಿಗರು ಟೀಕಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ