Latest

*ಆಸ್ತಿ ತೆರಿಗೆ ಸಂಗ್ರಹದಲ್ಲಿ ಹೊಸ ದಾಖಲೆ ಬರೆದ ಬಿಬಿಎಂಪಿ*

ಪ್ರಗತಿವಾಹಿನಿ ಸುದ್ದಿ: ಬಿಬಿಎಂಪಿ( ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಜುಲೈ ಅಂತ್ಯದ ವೇಳೆಗೆ ದಾಖಲೆಯ 3200 ಕೋಟಿ ರೂಪಾಯಿ ಆಸ್ತಿ ತೆರಿಗೆ ಸಂಗ್ರಹಿಸಿದೆ. ಇದು ಕಳೆದ ವರ್ಷದ ಈ ಅವಧಿಯಲ್ಲಿ ಸಂಗ್ರಹಿಸಿದ ಸುಮಾರು 800 ಕೋಟಿ ರೂಪಾಯಿ ಹೆಚ್ಚಳವಾಗಿದೆ.

ಕಳೆದ 10-12 ದಿನಗಳಲ್ಲಿ ಬರೋಬ್ಬರಿ 1200 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಇದರಲ್ಲಿ 380 ಕೋಟಿ ರೂ.ಗಳು ಸುಮಾರು 1.2 ಲಕ್ಷ ಆಸ್ತಿ ತೆರಿಗೆ ಡೀಫಾಲ್ಟರ್‌ಗಳಿಂದ ಒನ್ ಟೈಮ್ ಸೆಟಲ್‌ಮೆಂಟ್ ಯೋಜನೆಯಡಿಯಲ್ಲಿದೆ.

ಅಲ್ಲದೇ ಇದೆಲ್ಲವೂ ಜುಲೈ 2024-25 ಮತ್ತು ಜುಲೈ 2023-24 ರ ಆನ್‌ಲೈನ್ ಮೂಲಕ ಮಾಡಿದ ಪಾವತಿ ಮೊತ್ತವಾಗಿದೆ. ಚೆಕ್ ಮತ್ತು ಡಿಮ್ಯಾಂಡ್ ಡ್ರಾಫ್ಟ್‌ಗಳ ಮೂಲಕ ಇನ್ನೂ ಸುಮಾರು 150 ಕೋಟಿ ರೂ. ಸಂಗ್ರಹವಾಗಿದೆ ಎಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮನೀಶ್ ಮೌದ್ಗಿಲ್ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button