ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ತೆರಿಗೆ ಬಾಕಿ ಉಳಿಸಿಕೊಂಡಿರುವ ಬೆಂಗಳೂರಿನ ಮಂತ್ರಿ ಮಾಲ್ ಮೇಲೆ ಬಿಬಿಎಂಪಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ.
ಮಂತ್ರಿ ಮಾಲ್ ಹಾಗೂ ಬಿಬಿಎಂಪಿ ನಡುವೆ ತೆರಿಗೆ ಪಾವತಿ ವಾರ್ ಮುಂದುವರೆದಿದ್ದು, ನೋಟೀಸ್ ಮೇಲೆ ನೋಟೀಸ್ ನೀಡಿದರೂ ತೆರಿಗೆ ಪಾವತಿಸದ ಮಂತ್ರಿ ಮಾಲ್ ಮೇಲೆ ಬಿಬಿಎಂಪಿ ಅಧಿಕಾರಿಗಳ ತಂದ ದಾಳಿ ನಡೆಸಿದೆ.
42.63 ಕೋಟಿ ರೂಪಾಯಿ ತೆರಿಗೆ ಪಾವತಿ ಮಾಡದೇ ಮಂತ್ರಿ ಮಾಲ್ ಬಾಕಿ ಉಳಿಸಿಕೊಂಡಿದೆ ಎಂಬ ಆರೋಪ ಕೆಲಿಬಂದಿದೆ. ಈ ಹಿಂದೆ ಮಂತ್ರಿ ಮಾಲ್ ಕೊಟ್ಟಿದ್ದ ಚೆಕ್ ಬೌನ್ಸ್ ಅಗಿತ್ತು. ಇದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮಂತ್ರಿ ಮಾಲ್ ಗೆ ನೋಟೀಸ್ ನೀಡಿತ್ತು. ಆದರೂ ನೋಟೀಸ್ ಗೆ ಉತ್ತರಿಸದೇ, ತೆರಿಗೆಯನ್ನೂ ಪಾವತಿಸದೇ ಇರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರ ಆದೇಶದ ಮೇರೆಗೆ ಪಾಲಿಕೆ ಆಯುಕ್ತ ಯೋಗೇಶ್ ನೇತೃತ್ವದ ಅಧಿಕಾರಿಗಳ ತಂಡ ಮಂತ್ರಿ ಮಾಲ್ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.
ಕಚೇರಿಯಲ್ಲಿನ ಕಂಪ್ಯೂಟರ್, ಕುರ್ಚಿ, ಟೇಬಲ್ ಸೇರಿದಂತೆ ಎಲ್ಲಾ ವಸ್ತುಗಳನ್ನು ಜಪ್ತಿ ಮಾಡಲು ಮುಂದಾಗಿದ್ದು, ಮಾರ್ಷಲ್ ಗಳು, ಸಿಬ್ಬಂದಿಗಳು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಮಂತ್ರಿ ಮಾಲ್ ವ್ಯವಸ್ಥಾಪಕ ಶಬೀರ್ ಪ್ರತಿಕ್ರಿಯಿಸಿ, ತೆರಿಗೆ ಬಾಕಿ ಉಳಿಸಿಕೊಂದಿದ್ದು ಅಭಿಷೇಕ್ ಡೆವಲಪರ್ಸ್. ಮಂತ್ರಿ ಮಾಲ್ ಬಾಕಿ ಉಳಿಸಿಕೊಂಡಿಲ್ಲ. ಬಿಬಿಎಂಪಿ ದಾಳಿ ಕಾನೂನು ಬಾಹಿರ. ನಾವು ಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದೇವೆ. ಆದರೂ ಏಕಾಏಕಿ ಈ ರೀತಿ ದಾಳಿ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
*ಬಜೆಟ್ ವಿರುದ್ಧ ಕಾಂಗ್ರೆಸ್ ವಿನೂತನ ಪ್ರತಿಭಟನೆ; ರಾಜ್ಯಾದ್ಯಂತ ‘ಕಿವಿ ಮೇಲೆ ಹೂವು’ ಪೋಸ್ಟರ್ ಅಭಿಯಾನ*
https://pragati.taskdun.com/karnataka-budgetcongress-protestposter-abhiyana/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ