Latest

*ಬಜೆಟ್ ವಿರುದ್ಧ ಕಾಂಗ್ರೆಸ್ ವಿನೂತನ ಪ್ರತಿಭಟನೆ; ರಾಜ್ಯಾದ್ಯಂತ ‘ಕಿವಿ ಮೇಲೆ ಹೂವು’ ಪೋಸ್ಟರ್ ಅಭಿಯಾನ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ಬಿಜೆಪಿ ಬಜೆಟ್ ವಿರುದ್ಧ ವಿನೂತನ ರೀತಿ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ಮತ್ತೊಂದು ಪೋಸ್ಟರ್ ಅಭಿಯಾನ ಆರಂಭಿಸಿದ್ದು, ಕಿವಿ ಮೇಲೆ ಹೂವು ಇಟ್ಟಿದ್ದು ಸಾಕು ಎಂದು ಬರೆಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ.

ಬೆಂಗಳೂರು, ಮೈಸೂರು, ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಜೆಟ್ ವಿರುದ್ಧ ’ಕಿವಿ ಮೇಲೆ ಹೂವು’ ಪೋಸ್ಟರ್ ಅಭಿಯಾನ ಆರಂಭಿಸಿದ್ದಾರೆ.

Home add -Advt

ನಿನ್ನೆ ಬಜೆಟ್ ವೇಳೆ ವಿಧಾನಸಭೆಗೆ ಕಿವಿ ಮೇಲೆ ಹೂ ಇಟ್ಟುಕೊಂಡು ಬಂದಿದ್ದ ಕಾಂಗ್ರೆಸ್ ನಾಯಕರು ಬಜೆಟ್ ಭಾಷಣದ ಮೂಲಕ ಸಿಎಂ ಬಸವರಾಜ್ ಬೊಮ್ಮಾಯಿ ರಾಜ್ಯದ ಜನರ ಕಿವಿ ಮೇಲೆ ಹೂವಿಡುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇಂದು ರಾಜ್ಯಾದ್ಯಂತ ಕಿವಿ ಮೇಲೆ ಹೂವು ಅಭಿಯಾನ ವಿಸ್ತರಿಸಿದ್ದಾರೆ.

ಬಿಜೆಪಿಯೇ ಭರವಸೆ, ಬುರುಡೆ ಭರವಸೆ ಸಾಕಪ್ಪಾ ಸಾಕು ಕಿವಿ ಮೇಲೆ ಹೂವ ಎಂದು ಗೋಡೆಗಳ ಮೇಲೆ ವಿಭಿನ್ನ ಪೋಸ್ಟರ್ ಅಂಟಿಸಿ ಪ್ರತಿಭಟನೆ ನಡೆಸಿದ್ದಾರೆ.

*ಕೇದಾರನಾಥ ದೇವಾಲಯದ ಬಾಗಿಲು ತೆರೆಯಲು ಮುಹೂರ್ತ ನಿಗದಿ*

https://pragati.taskdun.com/kedaranathatemple-opendatefixuttarakhanda/

 

Related Articles

Back to top button