*ಹೆಚ್ಚು ಸದ್ದು ಮಾಡಿದ್ರೆ ಹುಷಾರ್: ಡಾಲ್ಮಿ ವಶಕ್ಕೆ ಪಡೆದ ಬೆಳಗಾವಿ ಪೊಲೀಸರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಯಾವುದೆ ಅನುಮತಿ ಪಡೆಯದೆ ಸಾರ್ವಜನಿಕರಿಗೆ ತೊಂದರೆ ಆಗವ ರೀತಿಯಲ್ಲಿ ಡಾಲ್ಮಿ ಹಚ್ಚಿದ ಪ್ರಕರಣದಲ್ಲಿ ಬೆಳಗಾವಿ ಪೊಲೀಸರು ಸಂಪೂರ್ಣ ಡಾಲ್ಮಿ ಜಪ್ತಿ ಮಾಡಿದ್ದಾರೆ.
ಸುರೇಶ ರಾಮಪ್ಪ ಬಂಗನ್ನವರ, ವೀರಭದ್ರ ನಾಗಪ್ಪ ಯರಗುದ್ದಿ, ರೋಹಿತ್ ದೇವಪ್ಪ ಲಕ್ಕನಗೌಡರ ಇವರು ಸುಳೇಬಾವಿ ಗ್ರಾಮದ ಹೊಸಕೇರಿ ಗಲ್ಲಿಯಲ್ಲಿ ಮದುವೆ ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಪರವಾನಿಗೆ ಪಡೆಯದೆ ರಾತ್ರಿ ವೇಳೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಜನರಿಗೆ ತೊಂದರೆಯನ್ನುಂಟು ಮಾಡಿ, ಸಾರ್ವಜನಿಕರಿಗೆ ಕಿರುಕುಳವಾಗುವಂತೆ ನಿಯಮೀರಿ ಸೌಂಡ್ ಹೆಚ್ಚಲಾಗಿತ್ತು. ಈ ಬಗ್ಗೆ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಕಲಂ 292, 270. 285, 125, ಸಹ ಕಲಂ: 3(5), ಬಿಎನ್ಎಸ್ & ಕಲಂ: 37. ಸಹ ಕಲಂ 109 ಕರ್ನಾಟಕ ಪೋಲೀಸ ಕಾಯ್ದೆ 1963 ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಳ್ಳಾಗಿದೆ.
ಈ ಪ್ರಕರಣದಲ್ಲಿ ಕೃತ್ಯಕ್ಕೆ ಉಪಯೋಗಿಸಿದ ಈ ಕೆಳಕಂಡ ವಸ್ತುಗಳಾದ 12000 ಮೌಲ್ಯದ 1 ಸೌಂಡ್ ಬೇಸ್, 10000 ಮೌಲ್ಯದ 1 ಸೌಂಡ್, 10000 ಮೌಲ್ಯದ ಮಿಕ್ಸ್ರ್, 10000 ಮೌಲ್ಯದ ಜನರೇಟರ್ ಹಾಗೂ
10000 ಮೌಲ್ಯದ ಟ್ರ್ಯಾಕ್ಟರ್ ಟ್ರಾಲಿ ಜಪ್ತಿ ಪಡಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.



