Cancer Hospital 2
Beereshwara 36
LaxmiTai 5

ಹುಷಾರ್, ನಾಳೆಯಿಂದ ದೇಶದಲ್ಲಿ ನೂತನ ನ್ಯಾಯ ಸಂಹಿತೆ

Anvekar 3
GIT add 2024-1

ಬದಲಾವಣೆ ಜಗದ ನಿಯಮ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸನ್ 1834 ರಲ್ಲಿ Lord Thomas Babington Mecaulay ಅವರ ಅಧ್ಯಕ್ಷತೆಯಲ್ಲಿ ಭಾರತೀಯ ನ್ಯಾಯ ಆಯೋಗ ರಚಿಸಲ್ಪಟ್ಟಿತ್ತು. ಆಯೋಗವು ಭಾರತದ ನ್ಯಾಯಾಂಗದ ವ್ಯಾಪ್ತಿ, ಅಧಿಕಾರ, ಮತ್ತು ಪೋಲೀಸ್ ಅಧಿಕಾರಗಳು ಮತ್ತು ಕಾನೂನಿನ ಚಾಲ್ತಿಯ ಬಗೆಗೆ ಒಂದು ಅವಲೋಕನವನ್ನು ಮಾಡಿತು. ಈ ಆಯೋಗವು ಸರಕಾರಕ್ಕೆ ಕೊಟ್ಟ ಪ್ರಮುಖ ಸೂಚನೆಗಳಲ್ಲೊಂದು ಭಾರತೀಯ ದಂಡ ಸಂಹಿತೆ.

ಭಾರತೀಯ ದಂಡ ಸಂಹಿತೆಯು ಸನ್ 1860 ರಲ್ಲಿ ಜಾರಿಗೆ ಬಂದಿತು. ಈ ಸಂಹಿತೆಯು ಒಳಗೊಂಡ ದಂಡನೆ, ಪಾಲನೆಗಳು ಕಾಲಕಾಲಕ್ಕೆ ಪರಿವರ್ತನೆ, ಸೇರ್ಪಡೆ, ಮತ್ತು ಅಳಿಸುವಿಕೆಯನ್ನು ಒಳಗೊಂಡು, ತನ್ನ ಮೂಲ ರೂಪದಲ್ಲಿಯೇ ಮುಂದುವರಿಯುತ್ತಾ ಬಂದಿತ್ತು. ಇಂದಿನ ಬದಲಾಗುತ್ತಿರುವ ಮನಸ್ಥಿತಿ, ಪರಿಸ್ಥಿತಿಗಳನ್ನು ಪರಿಗಣಿಸಿ, ಸಾಮಾನ್ಯ ಜನರಿಗೂ ಸರಳವಾಗುವಂತೆ, ಚಾಲ್ತಿಯಲ್ಲಿರುವ ದಂಡ ಸಂಹಿತೆಯನ್ನು ಮತ್ತಷ್ಟು ಸದೃಡಗೊಳಿಸಿ, ಜನ ಸಾಮಾನ್ಯರ ಹಕ್ಕು ಬಾಧ್ಯತೆಗಳನ್ನು ರಕ್ಷಿಸುವ ಸಲುವಾಗಿ, ಜನರ ಆಸೆ ಆಕಾಂಕ್ಷೆಗಳಿಗೆ ಧಕ್ಕೆಯಾಗದಂತೆ ಭಾರತೀಯ ನ್ಯಾಯ ಸಂಹಿತೆ ಇದೇ ಜುಲೈ 1ರಿಂದ ಜಾರಿಗೆ ಬರುವದು.
ಭಾರತೀಯ ನ್ಯಾಯ ಸಂಹಿತೆಯು ಭಾರತೀಯ ದಂಡ ಸಂಹಿತೆಯನ್ನು ರದ್ದುಗೊಳಿಸಿ ಜಾರಿಗೆ ಬರುವದು. ಈ ನ್ಯಾಯ ಸಂಹಿತೆಯ ಪ್ರಕ್ರಿಯೆಗಳು, ಜುಲೈ ಒಂದರಿಂದ ಎಸಗಿದ ಅಪರಾಧಗಳಿಗೆ ಲಾಗುವಾಗುವದು. ಉದಾಹರಣೆಗೆ, ನಟ ದರ್ಶನ್ ಅವರ ಕೇಸಿನಲ್ಲಿ ಹೊಸ ಕಾಯಿದೆ ಅನ್ವಯವಾಗುವದಿಲ್ಲ.
ಸಬಕಾ ಸಾಥ್ ಸಬಕಾ ವಿಕಾಸ್ ಮಂತ್ರವನ್ನು ಅನುಷ್ಟಾನಗೊಳಿಸಲು, ಶೀಘ್ರ ನ್ಯಾಯ ವಿಲೇವಾರಿಯ ಜವಾಬ್ದಾರಿಯನ್ನು ಸಂಪನ್ನಗೊಳಿಸಲು, ದಂಡ ಸಂಹಿತೆಯ ಬದಲಿಗೆ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ 2023 ಜಾರಿಗೆ ಬರುವದು.
ಹಾಗೆಯೇ ಈಗಿನ ಮುಂದುವರಿದ ನಾಗರೀಕ ಸಮಾಜಕ್ಕನುಗುಣವಾಗಿ, ಭಾರತೀಯ ಸಾಕ್ಷ್ಯ ಕಾಯಿದೆಗೆ ಬದಲಾಗಿ, ಭಾರತೀಯ ಸಾಕ್ಷ್ಯ ಅಧಿನಿಯಮ ಜಾರಿಗೆ ಬರುವದು. ಇದರ ಪ್ರಮುಖ ಬದಲಾವಣೆಯೆಂದರೆ, ದ್ವಿತೀಯ ಸಾಕ್ಷಿ (secondary evidence)ನ್ನು ಪ್ರಮುಖ ಸಾಕ್ಶ್ಶಿ ಎಂದೇ ಪರಿಗಣಿಸಲಾಗುವದು. ಮೂಲ ದಾಖಲೆಗಳ ನಕಲು, ನೋಂದಣಿ ಮಾಡದಿರುವ ದಾಖಲೆಗಳಿಗೆ, ಕಣ್ಣಾರೆ ಕಂಡ ಸಾಕ್ಷಿಗಳ ಹೇಳಿಕೆಗಳನ್ನು ಸಹ ಪರಿಗಣಿಸಲಾಗುವದು. ಮುಂದುವರಿದ ನಾಗರೀಕ ಸಮಾಜದ ಅನುಕೂಲಕ್ಕಾಗಿ ಡಿಜಿಟಲ್ ದಾಖಲೆಗಳನ್ನೂ, ಹೇಳಿಕೆಗಳನ್ನೂ, ಸಂದೇಶಗಳನ್ನೂ ಸಹ ಪರಿಶೀಲಿಸಿ ಪರಿಗಣಿಸುವ ಬದಲಾವಣೆಯನ್ನ ಇಲ್ಲಿ ಕಾಣಬಹುದಾಗಿದೆ. ಒಟ್ಟಾರೆಯಾಗಿ ನಾಳೆಯಿಂದ ಜಾರಿಗೆ ಬರುವ ಬದಲಾವಣೆಗೆ ನಾವು ಅಣಿಯಾಗಿ, ಅನುಸರಿಸಿ, ಪಾಲಿಸಿ ಸುರಕ್ಷಿತವಾಗಿರೋಣ.

Emergency Service


Bottom Add3
Bottom Ad 2