Kannada NewsKarnataka NewsLatest

*ಕರಡಿ ದಾಳಿಗೆ ಮತ್ತೋರ್ವ ವ್ಯಕ್ತಿ ಬಲಿ: ಅರಣ್ಯ ಇಲಾಖೆ ವಿರುದ್ಧ ಅಕ್ರೋಶ*

ಪ್ರಗತಿವಾಹಿನಿ ಸುದ್ದಿ: ಕೊಪ್ಪಳ ಜಿಲ್ಲೆಯಲ್ಲಿ ಕರಡಿ ದಾಳಿಗೆ ವೃದ್ಧರೊಬ್ಬರು ಬಲಿಯಾಗಿರುವ ಘಟನೆ ಮಾಸುವ ಮುನ್ನವೇ, ಕೊಪ್ಪಳ ಜಿಲ್ಲೆಯಲ್ಲಿ ಕರಡಿ ದಾಳಿಗೆ ಮತ್ತೋರ್ವ ವ್ಯಕ್ತಿ ಬಲಿಯಾಗಿರುವ ಘಟನೆ ನಡೆದಿದೆ.

ಈರಪ್ಪ(32) ಕರಡಿ ದಾಳಿಯಿಂದ ಮೃತಪಟ್ಟ ವ್ಯಕ್ತಿ.‌ ಈರಪ್ಪ, ಕೊಪ್ಪಳ ತಾಲೂಕಿನ ನಾಗೇಶನಹಳ್ಳಿ ಗ್ರಾಮದ ನಿವಾಸಿ ಆಗಿದ್ದು, ಎರಡು ದಿನದ ಹಿಂದೆ ಗ್ರಾಮದಿಂದ ಜಮೀನಿಗೆ ರಾತ್ರಿ ಹೋಗುವ ವೇಳೆ ಈರಪ್ಪ, ಮತ್ತು ಆತನ ಪತ್ನಿ, ಮಗಳ ಮೇಲೆ ಕರಡಿ ದಾಳಿ ಮಾಡಿದೆ.‌ ಕೂಡಲೆ ಮೂವರನ್ನು ಧಾರವಾಡದ ಎಸ್ ಡಿ ಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಈರಪ್ಪ ಮೃತಪಟ್ಟಿದ್ದಾನೆ.‌

Home add -Advt

ಈ ರೀತಿ ಘಟನೆಗಳು ಪದೆ ಪದೆ ನಡೆಯುತ್ತಿದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ ಹೊರ ಹಾಕಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಹೆಚ್ಚಾಗುತ್ತಿರೋ ಕರಡಿ ದಾಳಿಯಿಂದ‌ ಜನ ಕಂಗಾಲಾಗಿದ್ದಾರೆ.‌

Related Articles

Back to top button