ಪ್ರಗತಿವಾಹಿನಿ ಸುದ್ದಿ: ಬೆಳ್ಳಂ ಬೆಳಗ್ಗೆ ಜನರಿಗೆ ಶಾಕ್ ಎದುರಾಗಿದೆ. ಪ್ರತಿ ದಿನ ವಾಕಿಂಗ್, ಜಾಗಿಂಗ್ ಗೆ ಹೊದವರು ಸಾಕು ಪ್ರಾಣಿಗಳನ್ನು ನೋಡುತ್ತಿದ್ದರು. ಆದರೆ ಇಂದು ಏಕಾಏಕಿ ಕರಿಡಿ ಪ್ರತ್ಯಕ್ಷವಾಗಿದ್ದು, ಜನರು ದಿಕ್ಕಾಪಾಲಾಗಿ ಓಡಿದ್ದಾರೆ.
ಹೌದು.. ಇಂದು ಬೆಳ್ಳಂ ಬೆಳಗ್ಗೆ 5 ಗಂಟೆ ಸುಮಾರಿಗೆ ಹೊಸಪೇಟೆ ನಗರದಲ್ಲಿ ಎಂದಿನಂತೆ ವಾಕಿಂಗ್, ಜಾಗಿಂಗ್, ವ್ಯಾಪಾರಕ್ಕೆ ತೆರಳಿದ ಜನರು ಕರಡಿ ನೋಡಿ ಒಂದು ಕ್ಷಣ ಭಯಬಿತರಾಗಿದ್ದಾರೆ. ಹೊಸಪೇಟೆ ನಗರದ ರಾಣಿ ಪೇಟೆ ಬಡಾವಣೆಯಲ್ಲಿ ಇಂದು ನಸುಕಿನ ಜಾವ ಪ್ರತ್ಯಕ್ಷವಾದ ಕರಡಿ, ಶ್ರೀರಾಮುಲು ಉದ್ಯಾನವನ ಸೇರಿದಂತೆ ರಾಣಿಪೇಟ ಬಡಾವಣೆಯಲ್ಲಿ ಸುತ್ತಾಡಿದೆ. ನಂತರ ರಾಣಿಪೇಟ ಬಡಾವಣೆಯಲ್ಲಿರೋ ತೋಟಗಾರಿಕೆ ಇಲಾಖೆ ಸಸ್ಯಧಾಮ ಆವರಣದಲ್ಲಿ ಕರಡಿ ಅಡಗಿ ಕುಳಿತಿದೆ.
ಕರಡಿ ನೋಡಿದ ಕೂಡಲೇ ಜನರು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಧಾವಿಸಿ, ಸ್ಥಳೀಯರ ಸಹಕಾರದಿಂದ ಸತತ ಮೂರು ಗಂಟೆಗಳ ಕಾಲ ಕಾರ್ಯಾಚರಣೆ ಮಾಡಿ, ಚುಚ್ಚು ಮದ್ದು ನೀಡಿ ಕರಡಿಯನ್ನು ಸೆರೆ ಹಿಡಿದಿದ್ದಾರೆ. ಕರಡಿ ಸೇರೆ ಹಿಡಿದಿದ್ದರಿಂದ ಸ್ಥಳೀಯ ನಿವಾಸಿಗಳು ಆತಂಕದಿಂದ ದೂರಾಗಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ