Karnataka NewsLatestPolitics

*ರಾಸಾಯನಿಕ ವಿಶ್ಲೇಷಣಾ ವರದಿ  ನಂತರವೇ ಬಿಯರ್ ಮಾರಾಟಕ್ಕೆ ಬಿಡುಗಡೆ: ಸಚಿವ ತಿಮ್ಮಾಪುರ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ :  ಬ್ರಿವೇರಿಗಳಲ್ಲಿ  ಉತ್ಪಾದನೆಯಾಗುವ ಬಿಯರ್ ಗಳಲ್ಲಿ ಇಥೈಲ್ ಆಲ್ಕೋಹಾಲ್ ಇರುವಿಕೆ ಮತ್ತು ಮಿಥೈಲ್ ಆಲ್ಕೋಹಾಲ್, Obnoxious Substance  ಮತ್ತು Suspended Sediments  ಇಲ್ಲದಿರುವಿಕೆಯನ್ನು ಖಚಿತಪಡಿಸಿಕೊಂಡು ಮಾನವ ಸೇವನೆಗೆ ಯೋಗ್ಯವಾಗಿದೆ ಎಂದು ರಾಸಾಯನಿಕ ವಿಶ್ಲೇಷಣಾ ವರದಿಯನ್ನು ನೀಡಲಾದ ನಂತರವೇ ಬಿಯರ್‍ನ್ನು ಮಾರಾಟಕ್ಕೆ ಬಿಡುಗಡೆ ಮಾಡಲಾಗುತ್ತಿದೆ ಎಂದು ಅಬಕಾರಿ ಸಚಿವರು ಆರ್.ಜಿ.ತಿಮ್ಮಾಪುರ  ತಿಳಿಸಿದ್ದಾರೆ.

ಅವರು ವಿಧಾನ ಪರಿಷತ್ ನಲ್ಲಿ ಶಾಸಕ ಶಿವಕುಮಾರ್ ಕೆ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು. ಅಬಕಾರಿ ಇಲಾಖೆಯಲ್ಲಿ 2 ರಾಸಾಯನಿಕ ಪ್ರಯೋಗಾಲಯಗಳು ಬೆಂಗಳೂರು ಮತ್ತು ಧಾರವಾಡದಲ್ಲಿ ಮಂಜೂರಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ರಾಸಾಯನಿಕ ಪ್ರಯೋಗಾಲಯವು ಕಾರ್ಯನಿರ್ವಹಿಸುತ್ತಿದೆ. ಧಾರವಾಡದಲ್ಲಿನ ಪ್ರಯೋಗಾಲಯ ಪ್ರಾರಂಭಿಸಲು ಪರಿಶೀಲಿಸಲಾಗುತ್ತಿದ್ದು, ಅಬಕಾರಿ ಇಲಾಖೆಯಿಂದ ಖಾಸಗಿ ಪ್ರಯೋಗಾಲದ ಜೊತೆ ಯಾವುದೇ ಒಡಂಬಡಿಕೆ ಮಾಡಿಕೊಂಡಿರುವುದಿಲ್ಲ ಎಂದು ತಿಳಿಸಿದರು.
                                                                                                                                                                                                                                                       

ರಾಜ್ಯದಲ್ಲಿ 2025-26 ನೇ ಸಾಲಿನ ಅಕ್ಟೋಬರ್ 2025 ರ ಅಂತ್ಯಕ್ಕೆ ಸ್ವತಂತ್ರ ಆರ್.ವಿ.ಬಿ (Independent RVB)  64 ಹಾಗೂ ವಿವಿಧ ರೀತಿಯ ಸನ್ನದಿಗೆ ಹೊಂದಿಕೊಂಡಂತಿರುವ ಆರ್.ವಿ.ಬಿ (Attached RVB)    915 ಹೀಗೆ, ಪ್ರಸ್ತುತ ಒಟ್ಟು 979 ಸಂಖ್ಯೆಯ  ಆರ್.ವಿ.ಬಿ (ಪಬ್) ಸನ್ನದುಗಳು ಇರುತ್ತವೆ.

ಆರ್.ವಿ.ಬಿ ಸನ್ನದುಗಳಲ್ಲಿ 2023-24ನೇ ಆರ್ಥಿಕ ಸಾಲಿನಲ್ಲಿ 80.89  ಲಕ್ಷ ಲೀಟರ್ ಡ್ರಾಟ್ ಬಿಯರ್ ಹಾಗೂ  2024-25 ಆರ್ಥಿಕ ಸಾಲಿನಲ್ಲಿ 77.97 ಲಕ್ಷ ಲೀಟರ್ ಡ್ರಾಟ್ ಬಿಯರ್ ಮಾರಾಟವಾಗಿರುತ್ತದೆ ಎಂದು ಮಾಹಿತಿ ನೀಡಿದರು.

Home add -Advt

Related Articles

Back to top button