Belagavi NewsBelgaum NewsKannada NewsKarnataka NewsNationalPolitics

*ಶೀಘ್ರವೇ ಬೆಳಗಾವಿ-ಬೆಂಗಳೂರು ವಂದೇ ಭಾರತ ರೈಲು ಆರಂಭ: ವಿ ಸೋಮಣ್ಣ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಲೋಕಾಪುರ- ಧಾರವಾಡ ರೈಲು ಮಾರ್ಗದ ಬಗ್ಗೆ ನಾನು ಆಮೇಲೆ ಮಾತಾಡುತ್ತೇನೆ ಆದರೆ ಮುಂದಿನ ತಿಂಗಳು ಬೆಳಗಾವಿ- ಬೆಂಗಳೂರು ಮದ್ಯ ವಂದೇ ಭಾರತ ಸ್ಲಿಪಿಂಗ್ ಕೋಚ್ ಓಡಲಿದೆ ಎಂದು ಕೇಂದ್ರ ಸಚಿವ ವಿ ಸೋಮಣ್ಣ ಹೇಳದ್ದಾರೆ.‌ 

ಬೆಳಗಾವಿಯ ಖಾಸಗಿ ಹೋಟೆಲ್ ನಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಬೆಳಗಾವಿ- ಧಾರವಾಡ ನೇರ ರೈಲು ದಿ.ಸುರೇಶ್ ಅಂಗಡಿ ಕನಸಾಗಿದೆ. ಇಂದು ಸಭೆ ಮಾಡಿ ತೀರ್ಮಾನ ಮಾಡುತ್ತೇವೆ. ಸುರೇಶ್ ಅಂಗಡಿ ಕನಸು ಈ ಅವಧಿಯಲ್ಲಿ ಮುಗಿಸುವ ಪ್ರಯತ್ನ ಮಾಡುತ್ತೇವೆ. ಭೂ ಸ್ವಾಧೀನ ಪ್ರಕ್ರಿಯೆ ಸಮಸ್ಯೆಯಾಗಿದೆ. ಸಮಸ್ಯೆ ಬಗ್ಗೆ ಇಂದು ಚರ್ಚೆ ಮಾಡಿ ಸರಿ ಮಾಡುತ್ತೇನೆ. ಬೆಳಗಾವಿ ಡಿಸಿಯವರು ತುಂಬ ಗಂಭೀರವಾಗಿ ಪರಿಗಣಿಸಿದ್ದಾರೆ. 

ಸಿದ್ದರಾಮಯ್ಯ ಅನುಭವಿ ರಾಜಕಾರಣಿ. ಅವರು ಏನ್ ಮಾತಾಡ್ತಾರೆ ಎನ್ನುವುದು ಅವರಿಗೆ ಬಿಡುತ್ತೇನೆ. ಸಾಮಾನ್ಯ ಜನರ ಭಾವನೆಗೆ ತದ್ವಿರುದ್ಧವಾಗಿ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ, ಸಿಎಂ ಅವರನ್ನು ಯಾರಾದ್ರು ಮುಟ್ಟೊಕೆ ಆಗುತ್ತಾ. ಯಾರಾದ್ರು ಸಿಎಂ ಮುಟ್ಟಿದ್ರೆ ಪೊಲೀಸರು ಕೇಸ್ ಹಾಕುತ್ತಾರೆ. ಆ ಅರ್ಥದಲ್ಲಿ ಸಿಎಂ ಮಾತನಾಡಿರಬಹುದು ಎಂದು ನನ್ನನ್ನು ಮುಟ್ಟಿದ್ರೆ ರಾಜ್ಯದ ಜನ ಸುಮ್ನೆ ಬಿಡಲ್ಲ  ಎಂಬ ಸಿಎಂ ಹೇಳಿಕೆ ಕುರಿತು ಮಾತನಾಡಿದರು.‌

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button