Kannada NewsKarnataka NewsNational

*ರೀಲ್ಸ್ ಗಾಗಿ ನಡುರಸ್ತೆಯಲ್ಲೇ ಪೆಟ್ರೋಲ್‌ ಬಾಂಬ್‌ ಹಾಕಿ ಹುಚ್ಚಾಟ*

ಪ್ರಗತಿವಾಹಿನಿ ಸುದ್ದಿ: ಇತ್ತೀಚಿನ ದಿನಗಳಲ್ಲಿ ರಿಲ್ಸ್ ಮಾಡುವವರ ಹುಚ್ಚಾಟ ದಿನೆ ದಿನೆ ಹೆಚ್ಚಾಗುತ್ತಿದೆ. ಆಯುರ್ವೇದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಮೂವರು ಯುವಕರು ರಸ್ತೆ ಮದ್ಯೆ ಪೆಟ್ರೋಲ್ ಬಾಂಬ್ ಸ್ಪೋಟಿಸಿರುವ ಘಟನೆ ಹಾಸನ ಜಿಲ್ಲೆಯ ಹೊರವಲಯದ ಬೊಮ್ಮನಾಯಕನಹಳ್ಳಿಯಲ್ಲಿ ನಡೆದಿದೆ.

ಹಾಸನ ನಗರದ ಇಬ್ಬರು, ಕುಣಿಗಲ್ ತಾಲ್ಲೂಕಿನ ಓರ್ವ ವಿದ್ಯಾರ್ಥಿ ರಾತ್ರಿ ವೇಳೆ ಕಾಲೇಜಿನ ಎದುರಿನ ರಸ್ತೆಯಲ್ಲಿ ಪ್ಲಾಸ್ಟಿಕ್ ಕವರ್‌ಗೆ ಪೆಟ್ರೋಲ್ ತುಂಬಿ, ಅದರ ಮೇಲೆ ಪಟಾಕಿ ಬಾಂಬ್ ಇಟ್ಟು ಬೆಂಕಿ ಹಚ್ಚಿದ ಪರಿಣಾಮ ದೊಡ್ಡ ಶಬ್ದದೊಂದಿಗೆ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದೆ.

Home add -Advt

ಹಾಸನದ ರಾಜೀವ್ ಆಯುರ್ವೇದ ಕಾಲೇಜಿನ ಆಯುರ್ವೇದ ಮೆಡಿಸಿನ್ ಮತ್ತು ಸರ್ಜರಿ ಪದವಿ ವ್ಯಾಸಂಗ ಮಾಡುತ್ತಿರುವ ಲೋಕಕಿರಣ್ ಹೆಚ್ ಎನ್ನುವ ವಿದ್ಯಾರ್ಥಿ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಇಂತಹ ಹುಚ್ಚಾಟವನ್ನು ಮೆರೆದಿದ್ದಾರೆ. ಪೆಟ್ರೋಲ್‌ ಬಾಂಬ್ ಸ್ಫೋಟಗೊಂಡ ಹಿನ್ನಲೆ ಸುಮಾರು 10 ಅಡಿಯಷ್ಟು ಎತ್ತರಕ್ಕೆ ಬೆಂಕಿ ಹೊರಹೊಮ್ಮಿದ್ದು ಅಲ್ಲೇ ಪಕ್ಕದಲ್ಲಿ ಪೆಟ್ರೋಲ್ ಟ್ಯಾಂಕರ್ ನಿಲ್ಲಿಸಲಾಗಿತ್ತು. ಅದೃಷ್ಟವಶಾತ್ ದೊಡ್ಡ ಅನಾಹುತವೊಂದು ತಪ್ಪಿದೆ. ಇವರ ಕೆಲಸಕ್ಕೆ ಸಾಮಾಜೀಕ ಜಾಲತಾಣದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.‌

Related Articles

Back to top button