*ಬಿಮ್ಸ್ ನಲ್ಲಿ ವಿದ್ಯಾರ್ಥಿಗಳಿಗೆ ಜೀವನ ಕೌಶಲ್ಯದ ಪ್ರಾಮುಖ್ಯತೆಯ ಬಗ್ಗೆ ಅರಿವು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಶುಶ್ರೂಷಾ ಮಹಾವಿದ್ಯಾಲಯ ಬಿಮ್ಸ್ ಬೆಳಗಾವಿಯಲ್ಲಿ ನಿಮ್ಹಾನ್ಸ್ ಬೆಂಗಳೂರು ಹಾಗೂ ಯುವಜನ ಸಬಲೀಕರಣ ಇಲಾಖೆ ವತಿಯಿಂದ ಜೀವನ ಕೌಶಲ್ಯಗಳ ಕಾರ್ಯಾಗಾರವನ್ನು ಗುರುವಾರ ಬಿಮ್ಸ್ ವೈದ್ಯಕೀಯ ವಿಜ್ಞಾನ ಕಾಲೇಜಿನ ಸಂಭಾಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮಹಮ್ಮದ ಅಜುರುದ್ದೀನ್ ಶೇಖಜಿ ಜಿಲ್ಲಾ ಯುವ ಪರಿವರ್ತಕರು ಹಾಗೂ ಜೀವನ ಕೌಶಲ್ಯ ಸಂಪನ್ಮೂಲ ವ್ಯಕ್ತಿ ಮತ್ತು ಕುಮಾರ ಖೋತ್ ಜಿಲ್ಲಾ ಯುವ ಸಮಾಲೋಚಕರು ಭಾಗಿಯಾಗಿ ಶುಶ್ರೂಷಾ ಮಹಾವಿದ್ಯಾಲಯದ ಬಿ.ಎಸ್.ಸಿ ನರ್ಸಿಂಗ್ ಮತ್ತು ಎಂ.ಎ.ಸಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಜೀವನ ಕೌಶಲ್ಯದ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ವಿದ್ಯಾರ್ಥಿಗಳ ಜೀವನದಲ್ಲಿ ಅಳವಡಿಸಿಕೊಳ್ಳವುದರ ಪ್ರಾಮುಖ್ಯತೆಯ ಬಗ್ಗೆ ವಿದ್ಯಾರ್ಥಿಗಳಿಗೆ ಬೋಧನೆಯನ್ನು ನೀಡಿದರು.
ಕಾರ್ಯಾಗಾರಕ್ಕೆ ಡಾ. ನಾಮದೇವ ಮಾಳಗಿ ಶುಶ್ರೂಷಾ ಮಾಹಾವಿದ್ಯಾಲಯ ಬಿಮ್ಸ್ ಬೆಳಗಾವಿ ಪ್ರಾಂಶುಪಾಲರು, ಎನ್. ಎಸ್. ಎಸ್ ಘಟಕದ ಕಾರ್ಯಕ್ರಮದ ಅಧಿಕಾರಿಗಳಾದ ಡಾ.ರವಿ ಅಜೂರ ಹಾಗೂ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಜೊತೆಗೆ ಬಿ.ಎಸ್.ಸಿ ನರ್ಸಿಂಗ್ ಮತ್ತು ಎಂ.ಎ.ಸಿ ನರ್ಸಿಂಗ್ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದರು.