Kannada NewsKarnataka NewsLatest

ಬೆಳಗಾವಿ: ನೂತನ ಸದಸ್ಯರಿಗೆ ಸಂಭ್ರಮಾಚರಣೆ ಅವಕಾಶ ಕೊಡದ ಪಾಲಿಕೆ; ಪೊಲೀಸರೊಂದಿಗೆಮಾತಿನ ಚಕಮಕಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪಾಲಿಕೆ ಚುನಾವಣೆ ಫಲಿತಾಂಶ ಬಂದು ಒಂದು‌ ವರ್ಷ ಕಳೆದ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ಮಾಡಲು ಪಾಲಿಕೆಗೆ ಬಂದ ಕಾಂಗ್ರೆಸ್ ಹಾಗೂ ಪಕ್ಷೇತರ ಪಾಲಿಕೆ ಸದಸ್ಯರು ಪೊಲೀಸರೊಡನೆ ಮಾತಿನ ಚಕಮಕಿ ನಡೆಸಿದರು.

ಪಾಲಿಕೆಯ ಸದಸ್ಯರು ಆಯ್ಕೆಯಾಗಿ ಸರಿಯಾಗಿ ಒಂದು ವರ್ಷ ಕಳೆದಿದೆ. ಜನರ ಸಮಸ್ಯೆ ಈಡೇರಿಸಲು ನಮಗೆ ಸಾಧ್ಯವಾಗುತ್ತಿಲ್ಲ. ಸಕಾರಕ್ಕೆ ಬಿಸಿ ಮುಟ್ಟಿಸುವ ನಿಟ್ಟಿನಲ್ಲಿ ಪಾಲಿಕೆಯ ಸಭಾಂಗಣದಲ್ಲಿ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಲು ಪಾಲಿಕೆ ಆಯುಕ್ತರು ಬಿಡುತ್ತಿಲ್ಲ ಎಂದು ಕಾಂಗ್ರೆಸ್ ಹಾಗೂ ಪಕ್ಷೇತರ ಸದಸ್ಯರು ದೂರಿದರು.

ಸ್ಥಳಕ್ಕೆ ಆಗಮಿಸಿದ ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಸರಕಾರಿ ಕೆಲಸ ಇದ್ದರೆ ಒಳಗಡೆ ಬಂದು ಚರ್ಚೆ ನಡೆಸಲು ಮುಕ್ತ ಅವಕಾಶವಿದೆ. ಸರಕಾರಿ ಕಚೇರಿಯಲ್ಲಿ ಸಂಭ್ರಮಾಚರಣೆ ಮಾಡಲು ಯಾವುದೇ ಕಾರಣಕ್ಕೂ ಅವಕಾಶ ನೀಡಲಾಗುವುದಿಲ್ಲ ಎಂದರು.

ಇದಕ್ಕೆ ಬಗ್ಗದ ಸದಸ್ಯರು “ಒಂದು ವರ್ಷದಿಂದ ಪಾಲಿಕೆ ಆಯುಕ್ತರು ಯಾವುದೇ ಕೆಲಸ ಮಾಡುತ್ತಿಲ್ಲ. ವಾಡ್೯ನ ಜನರು ಸಮಸ್ಯೆ ಹೇಳಿಕೊಂಡು ನಮ್ಮ ಬಳಿ ಬರುತ್ತಿದ್ದಾರೆ. ಪಾಲಿಕೆಯಲ್ಲಿ ನಮಗೆ ಪ್ರವೇಶಿಸಲು ಪೊಲೀಸರನ್ನು ಬಳಕೆ ಮಾಡಿ ದೌರ್ಜನ್ಯ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.

Home add -Advt

ಪಾಲಿಕೆಯ ನೂತನ ಮಹಿಳಾ ಸದಸ್ಯರಿಗೆ ಒಳಗಡೆ ಕುಳಿತುಕೊಳ್ಳಲು ಅವಕಾಶ ನೀಡದೆ ಪೊಲೀಸರಿಂದ ಹೊರಗಡೆ ಹಾಕಿ ಅವಮಾನ ಮಾಡಿದ್ದಾರೆ ಎಂದು ದೂರಿದರು.

ಪಾಲಿಕೆ ಸದಸ್ಯರಾದ ಬಾಬಾಜಾನ ಮತವಾಲೆ, ರಿಯಾಜ್ ಕಿಲ್ಲೆದಾರ, ಶಕೀಲ ಮುಲ್ಲಾ, ರವಿ ಸಾಳಂಕಿ, ಖುರ್ಷಿದ ಮುಲ್ಲಾ, ಲಕ್ಷ್ಮೀ ಲೋಕರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು

ಪೊಲೀಸರಿಗೆ ಶರಣಾದ 5ನೇ ಆರೋಪಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button