Belagavi NewsBelgaum NewsKarnataka News
*ಪ್ರತಿಷ್ಠಿತ ಡಿಸಿಸಿ ಬ್ಯಾಂಕ್ ಚುನಾವಣೆಗೆ ಸವದತ್ತಿಯಿಂದ ವಿರೂಪಾಕ್ಷ ಮಾಮನಿ ಕಣಕ್ಕೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲೆಯ ಪ್ರತಿಷ್ಠಿತ ಡಿಸಿಸಿ ಬ್ಯಾಂಕ್ ಚುನಾವಣೆ ಇದೆ ವರ್ಷ ಕೊನೆಯಲ್ಲಿ ನಡೆಯಲಿದ್ದು, ಭರ್ಜರಿ ತಯಾರಿ ನಡೆಸಲಾಗುತ್ತಿದೆ. ಸವಸತ್ತಿ ಕ್ಷೇತ್ರದ ಅಭ್ಯರ್ಥಿಯಾಗಿ ವಿರೂಪಾಕ್ಷ ಮಾಮಾನಿ ಅವರ ಹೆಸರನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಘೋಷಣೆ ಮಾಡಿದ್ದಾರೆ.
ಸದ್ಯ ಸವದತ್ತಿಯ ಕ್ಷೇತ್ರದಿಂದ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ರತ್ನಾ ಮಾಮಾನಿ ಅವರಿದ್ದು, ಮುಂದೆ ನಡೆಯುವ ಚುನಾವಣೆಗೆ ವಿರೂಪಾಕ್ಷ ಮಾಮಾನಿ ಅವರ ಹೆಸರು ಘೋಷಿಸಲಾಗಿದೆ.
ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಗೆ ಸಿದ್ಧತೆ ಜೋರಾಗಿದ್ದು, ಸವದತ್ತಿ ತಾಲೂಕಿನ ಅಭ್ಯರ್ಥಿಯನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅಂತಿಮಗೊಳಿಸಿದ್ದಾರೆ.