
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಧಾರವಾಡ ಹೆಚ್ಚುವರಿ ಎಸ್ ಪಿ ನಾರಾಯಣ ಭರಮನಿಯನ್ನು ಬೆಳಗಾವಿ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಆಗಿ ನೇಮಕ ಮಾಡಲಾಗಿದೆ.
ಎಪ್ರಿಲ್ 28 ರಂದು ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಕ್ಕೆ ಕೋಪಗೊಂಡಿದ್ದ ಸಿಎಂ ಸಿದ್ದರಾಮಯ್ಯ ಎಎಸ್ ಪಿ ನಾರಾಯಣ ಭರಮನಿ ಅವರ ಮೇಲೆ ಕೈ ಎತ್ತಿ ಹೊಡೆಯಲು ಮುಂದಾಗಿದ್ದರು. ಈ ಘಟನೆಯಿಂದ ಅವಮಾನಿತರಾಗಿದ್ದ ಭರಮನಿ ಸ್ವಯಂ ನಿವೃತ್ತಿಗೆ ಮುಂದಾಗಿದ್ದರು.
ಈ ವಿಚಾರ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. ಹಾಗಾಗಿ ಸಿದ್ದರಾಮಯ್ಯ, ಗೃಹಸಚಿವರು ನಾರಾಯಣ ಭರಮನಿಗೆ ಸ್ವತಃ ಫೋನ್ ಮಾಡಿ ಮನವೊಲಿಸಿದ್ರು.
ಇದೀಗ ನಾರಾಯಣ ಭರಮನಿ ಅವರನ್ನು ಬೆಳಗಾವಿ ಕಾನೂನು ವಿಭಾಗದ ಡಿಸಿಪಿ ಆಗಿ ನೇಮಕ ಮಾಡಿ ಗೃಹ ಇಲಾಖೆ ಅಧಿನ ಕಾರ್ಯದರ್ಶಿ ಎಂ. ದನಂಜಯ್ ಆದೇಶ ಹೋರಡಿಸಿದ್ದಾರೆ.
ಈ ಮೂಲಕ ಅವಮಾನಕ್ಕೆ ಮನನೊಂದು ಎಎಸ್ ಪಿ ಹುದ್ದೆಗೆ ರಾಜೀನಾಮೆ ಪತ್ರ ಸಲ್ಲಿಸಿದ್ದ ಧಾರವಾಡ ಎಎಸ್ ಪಿ ನಾರಾಯಣ ಭರಮನಿ ಅವರಿಗೆ ರಾಜ್ಯ ಸರ್ಕಾರ ಗಿಪ್ಟ್ ನೀಡಿದಂತಾಗಿದೆ.