Belagavi NewsBelgaum NewsKarnataka NewsLatest
*ಬೆಳಗಾವಿಯಲ್ಲಿ ಘೋರ ದುರಂತ: ಕೃಷಿಹೊಂಡದಲ್ಲಿ ಬಿದ್ದು ತಂದೆ-ಮಗ ಸಾವು*

ಪ್ರಗತಿವಾಹಿನಿ ಸುದ್ದಿ: ಕೃಷಿ ಹೊಂಡದಲ್ಲಿ ಬಿದ್ದು ತಂದೆ-ಮಗ ಸಾವನ್ನಪ್ಪಿರುವ ದಾರುಣ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮಳಗಲಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಬಸವರಾಜ್ ಕೆಂಗೇರಿ (41) ಹಾಗೂ 14 ವರ್ಷದ ಮಗ ಧರೆಪ್ಪ ಮೃತ ದುರ್ದೈವಿಗಳು. ಸವದತ್ತಿಯ ಮುರಗೋಡ ಗ್ರಾಮದ ನಿವಾಸಿಗಳು.
ಕೃಷಿ ಹೊಂಡದಲ್ಲಿ ನೀರು ತರಲೆಂದು ಬಸವರಾಜ್ ಮಕ್ಕಳಾದ ಧರೆಪ್ಪ ಹಾಗೂ ಬಾಗಪ್ಪ ಹೋಗಿದ್ದರು. ಈ ವೇಳೆ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದಿದ್ದಾರೆ. ಇಬ್ಬರ ರಕ್ಷಣೆಗೆಂದು ಧಾವಿಸಿದ ಬಸವರಾಜ್ ನೀರಿಗೆ ಧುಮುಕಿದ್ದಾರೆ. ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರು ಬಾಗಪ್ಪನನ್ನು ರಕ್ಷಿಸಿದ್ದಾರೆ. ಆದರೆ ಬಸವರಾಜ್ ಹಗೂ ಇನ್ನೋರ್ವ ಮಗ ಧರೆಪ್ಪ ನೀರಿನಲ್ಲಿ ಮುಳುಗಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಮುರಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.