Belagavi NewsBelgaum NewsKarnataka NewsPolitics
*ಹುಕ್ಕೇರಿ ವಿದ್ಯುತ್ ಸಂಘದ ಚುನಾವಣೆ: ಜನರ ಮೇಲೆ ಲಾಠಿ ಬಿಸಿದ ಪೊಲೀಸರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಭಾರಿ ಜಿದ್ದಾ ಜಿದ್ದಿನಿಂದ ಕೂಡಿರುವ ಹುಕ್ಕೇರಿ ವಿದ್ಯುತ್ ಸಂಘದ ಚುನಾವಣೆ ಇಂದು ನಡೆಯುತ್ತಿದ್ದು, ರಮೇಶ್ ಕತ್ತಿ ಮತ್ತು ಸತೀಶ್ ಫ್ಯಾನ್ಸ್ ನಡುವೆ ವಾಗ್ವಾದ ನಡೆದಿತ್ತು. ಗಲಾಟೆ ತಾರಕ್ಕೇರಿದ ಬೆನ್ನಲ್ಲೇ ಜನರನ್ನು ಚದುರಿಸಲು ಪೊಲೀಸರು ಲಾಠಿ ಬೀಸಿದ್ದಾರೆ.
ಹುಕ್ಕೇರಿ ವಿದ್ಯುತ್ ಸಂಘದ 15 ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆ ತುರುಸಿನಿಂದ ನಡೆದಿದ್ದು, ಮತಕೇಂದ್ರದ ಬಳಿ ಜಮಾಯಿಸಿದ ಜನರನ್ನು ಚದುರಿಸಲು ಪೊಲೀಸರು ಲಾಠಿ ಬಳಕೆ ಮಾಡಿದ್ದಾರೆ. ಇದರಿಂದ ಕೆರಳಿದ ಜನರು ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಪೊಲೀಸರು ಲಾಠಿ ಬೀಸಿದ ಹಲವು ಘಟನೆಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವಿಡಿಯೋ ವೈರಲ್ ಆಗುತ್ತಿವೆ. ಜನರ ಮೇಲೆ ಪೊಲೀಸರು ನಿರ್ದಯವಾಗಿ ಲಾಠಿ ಬೀಸುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರ ವರ್ತನೆ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ.