Belagavi NewsBelgaum NewsLatest

*ಬೆಳಗಾವಿ- ಮೀರಜ್ ನಡುವೆ ವಿಶೇಷ ರೈಲು ವಿಸ್ತರಣೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಜನ ದಟ್ಟಣೆ ಕಡಿಮೆ ಮಾಡಲು ನೈಋತ್ಯ ರೈಲ್ವೆ ವಲಯ ಬೆಳಗಾವಿ-ಮೀರಜ್​ ನಡುವೆ ವಿಶೇಷ ರೈಲು ವಿಸ್ತರಿಸಲಾಗಿದೆ. 

ಬಿಟ್ ರೈಲುಗಳ ಸಂಖ್ಯೆ 07301/07302 ಬೆಳಗಾವಿ- ಮೀರಜ್-ಬೆಳಗಾವಿ ಮತ್ತು 07303/07304 ಬೆಳಗಾವಿ- ಮಿರಜ್-ಬೆಳಗಾವಿ ಕಾಯ್ದಿರಿಸದ ವಿಶೇಷ ರೈಲುಗಳ ಸಂಚಾರವನ್ನು ಅಕ್ಟೋಬರ್ 31ರವರೆಗೆ ವಿಸ್ತರಿಸಲಾಗಿದೆ. 

Related Articles

ಇದಕ್ಕೂ ಮೊದಲು ಈ ರೈಲುಗಳ ಸಂಚಾರವನ್ನು ಸೆಪ್ಟೆಂಬರ್ 30ರವರೆಗೆ ನಡೆಸಲು ಸೂಚಿಸಲಾಗಿತ್ತು. ಆದರೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲುಗಳ ಸಂಚಾರ ವಿಸ್ತರಿಸಲಾಗಿದೆ.

ರೈಲು ಸಂಖ್ಯೆ 07301

ಬೆಳಗಾವಿ-ಮೀರಜ್ ಕಾಯ್ದಿರಿಸದ ವಿಶೇಷ ರೈಲು ಬೆಳಗಾವಿ ನಿಲ್ದಾಣದಿಂದ ಬೆಳಗ್ಗೆ 6:00 ಗೆ ಹೊರಟು 9:00 ಗಂಟೆಗೆ ಮೀರಜ್ ನಿಲ್ದಾಣವನ್ನು ತಲುಪುತ್ತದೆ.

ರೈಲು ಸಂಖ್ಯೆ 07302

ಮೀರಜ್-ಬೆಳಗಾವಿ ಕಾಯ್ದಿರಿಸದ ವಿಶೇಷ ರೈಲು ಮೀರಜ್‌ನಿಂದ ಬೆಳಿಗ್ಗೆ 9:50 ಹೊರಟು ಮಧ್ಯಾಹ್ನ 12:50ಕ್ಕೆ ಬೆಳಗಾವಿ ನಿಲ್ದಾಣವನ್ನು ತಲುಪಲಿದೆ.

ರೈಲು ಸಂಖ್ಯೆ (07303)

ಬೆಳಗಾವಿ-ಮೀರಜ್ ರೈಲು ಬೆಳಗಾವಿ ನಿಲ್ದಾಣದಿಂದ ಮಧ್ಯಾಹ್ನ 1:30ಕ್ಕೆ ಹೊರಡಲಿದೆ. ಮತ್ತು ಸಂಜೆ 4:30ಕ್ಕೆ ಮೀರಜ್‌ಗೆ ತಲುಪಲಿದೆ.

ರೈಲು ಸಂಖ್ಯೆ (07304)

ಮೀರಜ್-ಬೆಳಗಾವಿ ರೈಲು ಮೀರಜ್‌ನಿಂದ ಸಂಜೆ 5:35ಕ್ಕೆ ಹೊರಟು ರಾತ್ರಿ 8:35ಕ್ಕೆ ಬೆಳಗಾವಿ ನಿಲ್ದಾಣವನ್ನು ತಲುಪಲಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button