Belagavi NewsBelgaum NewsKarnataka NewsPolitics

*ಬೆಳಗಾವಿ: ಸಕ್ಕರೆ ಕಾರ್ಖಾನೆ ಮಾಲೀಕರ ಜತೆ ಸಿಎಂ ಸಭೆ: ಏನಂದ್ರು ಡಿ.ಕೆ.ಶಿವಕುಮಾರ್?*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರ ಜತೆಗಿನ ಸಭೆಯಲ್ಲಿ ಸಿಎಂ ಡಿ ಕೆ ಶಿವಕುಮಾರ್ ಅವರು ಪ್ರಾಸ್ತಾವಿಕ ಮಾತನಾಡಿದರು.

ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ರೈತರ ಕೂಗಿಗೆ ಗೌರವ ನೀಡಿ ಕೆಲವು ತೀರ್ಮಾನಗಳನ್ನು ಮಾಡಿತ್ತು.

ಸರ್ಕಾರ ಸ್ವಲ್ಪ ಹಣ ನೀಡುವುದು. ಉಳಿದದ್ದನ್ನು ಸಕ್ಕರೆ ಕಾರ್ಖಾನೆ ಮಾಲೀಕರು ನೀಡುವುದು ಎಂದು ಈ ಹಿಂದೆ ತೀರ್ಮಾನ ಆಗಿತ್ತು.

80% ಕಾರ್ಖಾನೆಗಳು ಅದನ್ನು ಪಾಲಿಸಿವೆ. ಕೆಲವರು ತೀರ್ಮಾನ ಪಾಲಿಸಿಲ್ಲ. ಅವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರೈತರನ್ನು ವಿಶ್ವಾಸಕ್ಕೆ ಪಡೆಯುವಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರು ಸಫಲರಾಗಿಲ್ಲ.

ರೈತರು, ಮಾಲೀಕರ ರಕ್ಷಣೆ ಮಾಡಬೇಕಾದ ಜವಾಬ್ದಾರಿ ಸರ್ಕಾರಗಳ ಮೇಲಿವೆ.

ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಬಿಹಾರ, ಉತ್ತರ ಪ್ರದೇಶ ಸೇರಿದಂತೆ ಬೇರೆ ರಾಜ್ಯಗಳಲ್ಲೂ ಈ ಸಮಸ್ಯೆ ಕಾಡುತ್ತಿದೆ.

10 ವರ್ಷಗಳಿಂದ ಸಕ್ಕರೆ ಬೆಲೆ ಏರಿಕೆ ಆಗಿಲ್ಲ.

ಕೇಂದ್ರ ಸಚಿವರು ನಮ್ಮ ರಾಜ್ಯದವರೇ ಆಗಿದ್ದು, ಅವರು ತಮ್ಮದೇ ಆದ ಪ್ರಯತ್ನ ಮಾಡುತ್ತಿದ್ದಾರೆ.

ರೈತರ ಪ್ರತಿಭಟನೆ ಸಮಯದಲ್ಲಿ ಅವರನ್ನು ನಾನು, ಜಿಲ್ಲಾ ಮಂತ್ರಿಗಳು ಹಾಗೂ ಶಾಸಕರು ಕಿತ್ತೂರಿನಲ್ಲಿ ಭೇಟಿ ಮಾಡಿ ಅವರ ಅಹವಾಲು ಆಲಿಸಿದ್ದೇವೆ.

10 ವರ್ಷಗಳಿಂದ ಬೆಲೆ ಏರಿಕೆ ಆಗಿಲ್ಲ. ಇದರಿಂದ ರೈತರಿಗೆ ನಷ್ಟ ಹೆಚ್ಚಾಗಿದೆ. ಹೀಗಾಗಿ ಪ್ರತಿ ಟನ್ ಕಬ್ಬಿಗೆ 6 ಸಾವಿರವರೆಗೂ ಬೆಲೆ ನಿಗದಿ ಮಾಡಿ ಪರಿಹಾರ ನೀಡಿ ಎಂದು ರೈತರು ಬೇಡಿಕೆ ಇಟ್ಟಿದ್ದಾರೆ.

ಇದಕ್ಕೆ ಪರಿಹಾರ ನೀಡಬೇಕಾಗಿರುವುದು ನೀವು (ಸಕ್ಕರೆ ಕಾರ್ಖಾನೆಗಳ ಮಾಲೀಕರು) ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ.

ರಾಜ್ಯದಲ್ಲಿ ಶಾಂತಿ ಕಾಪಾಡುವುದು ನಮ್ಮ ಕರ್ತವ್ಯ.

ಇಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಅನೇಕ ಸಮಸ್ಯೆಗಳಿವೆ. ಹಣಕಾಸು, ಬ್ಯಾಂಕ್, ಎಥನಾಲ್, ವಿದ್ಯುತ್ ಬೆಲೆ ಸಮಸ್ಯೆ ಸೇರಿ ಅನೇಕ ವಿಚಾರಗಳಿವೆ. ಹೀಗಾಗಿ ನಾನೊಬ್ಬನೇ ತೀರ್ಮಾನ ಮಾಡಲು ಆಗುವುದಿಲ್ಲ. ಹೀಗಾಗಿ ಎಲ್ಲರ ಜತೆ ಚರ್ಚಿಸುತ್ತೇನೆ ಎಂದು ರೈತರ ಬಳಿ ಸಮಯ ಕೇಳಿದ್ದೆ.

ಇಂದು ಇಡೀ ಸರ್ಕಾರ ನಿಮ್ಮ ಮುಂದೆ ಬಂದು ಕೂತಿದೆ.

ಶಾಸಕರು ಹಾಗೂ ಸಂಸದರಿಗೆ ತಮ್ಮದೇ ಆದ ಒತ್ತಡಗಳು ಇರುತ್ತವೆ.

ಈ ಸಮಸ್ಯೆಗೆ ಸೌಹಾರ್ದತೆ ಮೂಲಕ ಪರಿಹಾರ ಕಂಡು ಹಿಡಿಯಬೇಕು.

ಇದು ರಾಜಕಾರಣ ಮಾಡುವ ಸಭೆಯಲ್ಲ. ಅದಕ್ಕೆ ಬೇರೆ ವೇದಿಕೆಗಳಿವೆ.

ನಾವು ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡಲು ವಾರ್ಷಿಕ 20 ಸಾವಿರ ಕೋಟಿ ರೂ. ವೆಚ್ಚ ಮಾಡುತ್ತಿದ್ದು, ಈ ವರ್ಷ 32 ಸಾವಿರ ಕೋಟಿ ನೀಡಬೇಕಾಗಿದೆ.

ಮಳೆ ಕೊರತೆ ಹಿನ್ನೆಲೆಯಲ್ಲಿ ರೈತರು ಹೆಚ್ಚು ವಿದ್ಯುತ್ ಬಳಸುತ್ತಿದ್ದಾರೆ.

ಕಬ್ಬು ಇಳುವರಿ ಕಡಿಮೆಯಾಗಿದೆ.

ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ನಿಮ್ಮ ಸಲಹೆ ಇರಲಿ. ನಿಮ್ಮ ಸಮಸ್ಯೆಗಳನ್ನು ನೀವು ಹೇಳಿ.

ನಾವು ಯಾರ ಪರವೂ ಇಲ್ಲ. ಕಾರ್ಖಾನೆ ಇಲ್ಲವಾದರೆ ರೈತರಿಗೆ ತೊಂದರೆ. ರೈತರಿಲ್ಲ ಎಂದರೆ ಕಾರ್ಖಾನೆಗಳಿಗೆ ತೊಂದರೆ. ಹೀಗಾಗಿ ಎಲ್ಲರ ರಕ್ಷಣೆ ಮಾಡಬೇಕು.

ನಾನು ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿದ್ದೆ. ಅವರು ಕೂಡ ನಮ್ಮ ರಾಜ್ಯದ ರೈತರ ವಿಚಾರ ಎಂದು ಈ ಬಗ್ಗೆ ಗಮನ ಹರಿಸಿದ್ದಾರೆ. ಇದು ದೇಶದ ವಿಚಾರವಾಗಿದೆ. ಹೀಗಾಗಿ ಈ ವಿಚಾರದಲ್ಲಿ ರಾಷ್ಟ್ರ ಮಟ್ಟದಲ್ಲಿ ತೀರ್ಮಾನ ಮಾಡಬೇಕು.

ಸಕ್ಕರೆ ಉತ್ಪಾದನೆ ಕುಸಿದಿದೆ. ಇಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸಮಸ್ಯೆಗಳಿವೆ.

ನಮಗೆ ರೈತರು ಹಾಗೂ ನಿಮ್ಮ (ಸಕ್ಕರೆ ಕಾರ್ಖಾನೆ ಮಾಲೀಕರ) ಬದುಕು ಮುಖ್ಯ.

ನಾನು ಮಹಾರಾಷ್ಟ್ರ ಸಿಎಂ ಜತೆಗೂ ಚರ್ಚೆ ಮಾಡಿದ್ದು, ಈ ವಿಚಾರ ಬಗೆಹರಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button