
ಪ್ರಗತಿವಾಹಿನಿ ಸುದ್ದಿ: ಚಳಿಗಾಲದ ಅಧಿವೇಶನಕ್ಕೆ ಸಡ್ಡು ಹೊಡೆದು ಮಹಾಮೇಳಾವ್ ನಡೆಸಲು ಆಗಮಿಸುತ್ತಿದ್ದ ಎಂಇಎಸ್ ಮುಖಂಡರನ್ನು ಖಾನಾಪುರದಲ್ಲಿ ಬೆಳಗಾವಿ ಪೊಲೀಸರು ಬಂಧಿಸಿದ ಘಟನೆ ಸೋಮವಾರ ನಡೆದಿದೆ.
ಅಧಿವೇಶನಕ್ಕೆ ವಿರುದ್ಧವಾಗಿ ಎಂಇಎಸ್ ಪುಂಡರಿಂದ ಮಹಾಮೇಳಾವ್ ಕ್ಕೆ ಜಿಲ್ಲಾಡಳಿತ ಅನುಮತಿ ನೀಡದಿದ್ದರೂ ಪುಂಡಾಟ ಮೆರೆದು ಮಹಾಮೇಳಾವ್ ನಡೆಸಲು ಆಗಮಿಸುತ್ತಿದ್ದ ಮಹಾರಾಷ್ಟ್ರದ ಪುಂಡ ನಾಯಕರಿಗೆ ಪೊಲೀಸರು ಬಂಧಿಸಿ ಬಿಸಿ ಮುಟ್ಟಿಸಿದ್ದಾರೆ.
ನಾಡದ್ರೋಹಿಗಳಿಗೆ ಬ್ರೇಕ್ ಹಾಕಲು ಪೊಲೀಸರ ಗಡಿಭಾಗದಲ್ಲಿ ಮೊದಲೇ ಬಂದೋಬಸ್ತ್ ಮಾಡಿಕೊಂಡಿದ್ದರು. ಇತ್ತ ಬೆಳಗಾವಿ ನಗರದಸಂಭಾಜಿ ವೃತ್ತದಲ್ಲಿ ನೂರಕ್ಕೂ ಅಧಿಕ ಪೊಲೀಸರಿಂದ ಭದ್ರತೆ ಮಾಡಲಾಗಿದೆ. ಎಂಇಎಸ್ ಪುಂಡರು ಬರ್ತಿದ್ದಂತೆ ವಶಕ್ಕೆ ಪಡೆಯಲಿರುವ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದರು.
ನಾಲ್ಕು ಕಡೆಗಳಲ್ಲಿ ಭಾರೀ ಬಂದೋಬಸ್ತ್ ಮಾಡಿಕೊಂಡಿರುವ ಪೊಲೀಸರು ಬೆಳಗಾವಿ ಖಡೇಬಜಾರ್, ಕ್ಯಾಂಪ್, ಟಿಳಕವಾಡಿ, ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂದೋಬಸ್ತ ಮಾಡದ್ದರೇ, ಬೆಳಗಾವಿ, ನಿಪ್ಪಾಣಿ ಗಡಿಯಲ್ಲಿ ಬೀಗಿ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ.




