Advertisement -Home Add

100 ಸಫಲ ಡಯಾಲೈಸಿಸ್‌ನ ಸಂಭ್ರಮ

ಒಂದುವರೆ ತಿಂಗಳಲ್ಲಿ ನೂರು ರೋಗಿಗಳಿಗೆ ಡಯಾಲೈಸಿಸ್‌

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಪ್ರಸ್ತುತ ಕೊರೊನಾ ಲಾಕಡೌನ್ ಸಂದರ್ಭದಲ್ಲಿಯೂ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ರೋಟರಿ ಕೆಎಲ್ಇ ಡಯಾಲೈಸಿಸ್ ಕೇಂದ್ರದಲ್ಲಿ ೧೦೦ ಮೂತ್ರಪಿಂಡ ರೋಗಿಗಳಿಗೆ ಡಯಾಲೈಸಿಸ್‌ ಪ್ರಕ್ರಿಯೆಯನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ಹೆಸರಾಂತ ಮೂತ್ರಪಿಂಡ ಶಾಸ್ತ್ರಜ್ಞ ಡಾ. ವಿಜಯಕುಮಾರ ಪಾಟೀಲ ಮಾತನಾಡುತ್ತ ಮೂತ್ರಪಿಂಡ ಖಾಯಿಲೆ ಇರುವ ರೋಗಿಗಳಿಗೆ ಡಯಾಲೈಸಿಸ್‌ ಕಡ್ಡಾಯವಾಗಿ ಬೇಕಾಗಿರುವ ಚಿಕಿತ್ಸೆಯಾಗಿದೆ. ಕೊರೊನಾ ಭೀತಿಯ ಸಂದರ್ಭದಲ್ಲಿ ರೋಗಿಗಳು ಕೊರೊನಾ ಸೋಂಕಿಗೆ ಹೆದರುವ ಅಗತ್ಯವಿಲ್ಲ. ಸುರಕ್ಷತಾ ನಿಯಮಗಳನ್ನು ಪಾಲಿಸುತ್ತ, ಧೈರ‍್ಯದಿಂದ ಆಸ್ಪತ್ರೆಗೆ ಭೇಟಿನೀಡಿ ಡಯಾಲೈಸಿಸ್‌ ಚಿಕಿತ್ಸೆಯನ್ನು ಹೊಂದಬಹುದಾಗಿದೆ. ಅದರಲ್ಲಿಯೂ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ರೋಗಿಯ ಎಲ್ಲ ಸುರಕ್ಷತಾ ನಿಯಮಗಳನ್ನು ಪಾಲಿಸುವ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ನಂತರ ವೈದ್ಯರ ತಂಡಕ್ಕೆ ಶುಭ ಹಾರೈಸುವ ಮೂಲಕ ಮಾತನಾಡಿದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕರಾದ ಡಾ. ಎಸ್ ಸಿ ಧಾರವಾಡ, ಡಯಾಲೈಸಿಸ್‌ ಕೇಂದ್ರವು ದಕ್ಷಿಣ ಬೆಳಗಾವಿಯ ಆರೋಗ್ಯ ಸಂಜೀವಿನಿಯೆಂದೇ ಹೆಸರುವಾಸಿಯಾಗಿರುವ ನಮ್ಮ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಕಿರೀಟಕ್ಕೆ ಗರಿ ಇಟ್ಟಂತಾಗಿದೆ. ಪ್ರಾರಂಭವಾದ ಕೇವಲ ಒಂದುವರೆ ತಿಂಗಳಲ್ಲಿ ನೂರು ರೋಗಿಗಳಿಗೆ ಡಯಾಲೈಸಿಸ್‌ ಚಿಕಿತ್ಸೆಯನ್ನು ನೀಡಿದೆ. ಇದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅತ್ಯಲ್ಪ ಸಮಯದಲ್ಲಿ ಜಗಮೆಚ್ಚುಗೆಯ ಕಾರ್ಯನಿರ್ವಹಿಸಿದ ವೈದ್ಯರ ತಂಡಕ್ಕೆ ಕೆ ಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ಹಾಗೂ ಯು ಎಸ್ ಎಮ್ ಕೆ ಎಲ್ ಇ ಯ ನಿರ್ದೇಶಕರಾದ ಡಾ. ಹೆಚ್ ಬಿ ರಾಜಶೇಖರ ಅಭಿನಂದಿಸಿದ್ದಾರೆ.
ಈ ಸಂದರ್ಭದಲ್ಲಿ ಮೆಡಿಸಿನ್ ವಿಬಾಗದ ಮುಖ್ಯಸ್ಥರಾದ ಡಾ. ಆರ್ ಆರ್ ವಾಳ್ವೆಕರ, ಹಿರಿಯ ವೈದ್ಯರಾದ ಡಾ. ಬಿ ಎಸ್ ಮಹಾಂತಶೆಟ್ಟಿ, ನರ್ಸಿಂಗ ಅಧಿಕ್ಷಕಿ  ಇಂದುಮತಿ ವಾಘಮಾರೆ ಡಯಾಲೈಸಿಸ್‌ನ ತಂತ್ರಜ್ಞರು, ಸಾರ್ವಜನಿಕ ಸಂಪರ್ಕಾಧಿಕಾರಿಗಳು ಉಪಸ್ಥಿತರಿದ್ದರು.