Advertisement -Home Add

ಉದ್ಯೋಗ ವಿನಿಮಯ ಕಚೇರಿ ಸ್ಥಳಾಂತರ

ಸೆಪ್ಟಂಬರ್ 9 ರಿಂದಲೇ ಸ್ಥಳಾಂತರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – : ಬೆಳಗಾವಿಯ ಸದಾಶಿವನಗರದಲ್ಲಿದ್ದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಸ್ಥಳಾಂತರಿಸಲಾಗಿದೆ.

ಸೆಪ್ಟಂಬರ್ 9 ರಿಂದಲೇ ಜಾರಿಗೆ ಬರುವಂತೆ ಕಚೇರಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಸಹಾಯಕ ನಿರ್ದೇಶಕರು, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ತಳಮಹಡಿ ಕೊಠಡಿ ಸಂಖ್ಯೆ: ಟಿಪಿ೨, ಟಿಪಿ೩, ಸುವರ್ಣ ವಿಧಾನಸೌಧ, ಬೆಳಗಾವಿ -ಇದು ಉದ್ಯೋಗ ವಿನಿಮಯ ಕಚೇರಿಯ ಹೊಸ ವಿಳಾಸ.

ಈ ಕಛೇರಿಗೆ ಸಂಬಂಧಿತ ಯಾವುದೇ ಕಾರ್ಯಗಳಿಗಾಗಿ ಬದಲಾದ ವಿಳಾಸದಲ್ಲಿ ಸಂಪರ್ಕಿಸುವಂತೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.