Advertisement -Home Add

ಕೋರೆ ಜನ್ಮದಿನ: ವಿವಿಧೆಡೆ ವನಮಹೋತ್ಸವ

ಡಾ. ಪ್ರಭಾಕರ ಕೋರೆಯವರ ೭೩ ನೇಯ ಹುಟ್ಟು ಹಬ್ಬದ ನಿಮಿತ್ತ ೧೦೦ ಕ್ಕೂ ಅಧಿಕ ಸಸಿಗಳನ್ನು ನೇಡುವ ಕಾರ್ಯಕ್ರಮ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ/ ಬೆಳಗಾವಿ – ಕೆ.ಎಲ್.ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆಯವರ ೭೩ನೇಯ ಜನ್ಮ ದಿನದ ಅಂಗವಾಗಿ ಸಿಬ್ಬಂದಿ ಚಿಕ್ಕೋಡಿಯ ಕೆ. ಎಲ್. ಇ. ಶಾಲಾ ಆವರಣದಲ್ಲಿ ಹಾಗೂ ಸುತ್ತಮುತ್ತಲಿನ ಬೆಟ್ಟಗುಡ್ಡದ ಮೇಲೆ ೧೦೦ ಸಸಿಗಳನ್ನು ನೇಡುವ ಕಾರ್ಯಕ್ರಮ ನೆಡಲಾಯಿತು.

ಕೆ. ಎಲ್. ಇ. ಆಡಳಿತ ಮಂಡಳಿ ಸದಸ್ಯ ಬಸವರಾಜ ಪಾಟೀಲ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವಿಶ್ರಾಂತ ಅಜೀವ ಸದಸ್ಯರಾದ ಡಾ. ಎಮ್. ಟಿ. ಕುರಣ , ಪ್ರಾಚಾರ್ಯರಾದ ಡಾ. ಪ್ರಸಾದ ರಾಂಪುರೆ, ಪ್ರೊ. ಯು. ಆರ್. ರಾಜಪುತ, ಡಾ. ಭಾರತಿ ಪಾಟೀಲ, ಪ್ರೊ. ಆರ್ ಆರ್ ನಾಯಕ, ಪ್ರೊ. ಹರೀನಾಥ ರೆಡ್ಡಿ, ಪ್ರೊ. ದುಂಡಪ್ಪಾ ಸೊಲಾಪುರೆ, ಪ್ರೊ. ದರ್ಶನ ಬಿಳ್ಳೂರ, ಪ್ರೊ.ವಿಶ್ವೆಶ್ವರಯ ಹಳ್ಳೂರ, ಪ್ರೊ. ಸಂದೀಪ ಕುಡಚೆ ಚಿಕ್ಕೋಡಿಯ ಕೆ.ಎಲ್. ಇ. ಅಂಗಸಂಸ್ಥೆಗಳ ಹಾಗೂ ಅಂಕಲಿ ಸಿ. ಬಿ. ಎಸ್. ಸಿ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.

ಲಿಂಗರಾಜ ಕಾಲೇಜಿನಲ್ಲಿ

ಡಾ. ಪ್ರಭಾಕರ ಕೋರೆಯವರ ೭೩ನೇ ಹುಟ್ಟುಹಬ್ಬ ನಿಮಿತ್ತವಾಗಿ ಲಿಂಗರಾಜ ಕಾಲೇಜಿನ ಆವರಣದಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಸಸಿಗಳನ್ನು ನೆಡುವುದರ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಚಾರ್ಯ ಡಾ. ಆರ್. ಎಂ. ಪಾಟೀಲ ಅವರು ಡಾ.ಪ್ರಭಾಕರ ಕೋರೆಯವರು ಶಿಕ್ಷಣ ಹಾಗೂ ವೈದ್ಯಕೀಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಕೆಎಲ್‌ಇ ಸಂಸ್ಥೆಯು ಇಂದು ಜಾಗತಿಕವಾಗಿ ಮನ್ನಣೆ ಗಳಿಸಿದ್ದರೆ ಅದರ ಹಿಂದಿನ ಮಹಾನ್ ಶಕ್ತಿ ಡಾ.ಕೋರೆಯವರು. ಇಂದಿನ ಯುವ ಪೀಳಿಗೆಗೆ ಅವರು ರೋಲ್‌ಮಾಡೆಲ್ ಎಂದು ಹೇಳಿದರು.
ನಾನಾ ವಿಧದ ಸಸಿಗಳನ್ನು ಕಾಲೇಜಿನ ಆವರಣದಲ್ಲಿ ಎನ್.ಸಿ.ಸಿ. ಅಧಿಕಾರಿ ಡಾ.ಮಹೇಶ ಗುರನಗೌಡರ, ಕ್ರೀಡಾ ವಿಭಾಗ ಡಾ.ಸಿ. ರಾಮರಾವ್ ಹಾಗೂ ಎನ್.ಎಸ್.ಎಸ್. ವಿಭಾಗದ ಡಾ.ಚನ್ನಪ್ಪಗೋಳ ನೇತೃತ್ವದಲ್ಲಿ ಸಿಬ್ಬಂದಿ ವರ್ಗದವರು ನೆಟ್ಟರು. ಉಪಪಾಚಾರ್ಯ ಎಂ.ಆರ್.ಬನಹಟ್ಟಿ, ಕೆಎಲ್‌ಇ ಆಜೀವ ಸದಸ್ಯ ಡಾ.ಪ್ರಕಾಶ ಕಡಕೋಳ, ಪಪೂ ಪ್ರಾಚಾರ್ಯ ಗಿರಿಜಾ ಹಿರೇಮಠ ಉಪಸ್ಥಿತರಿದ್ದರು.