Latest

ಕೊವಿಡ್ ಗೆ ಬಲಿಯಾದ ಕೊರೊನಾ ವಾರಿಯರ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯಾದ್ಯಂತ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಕೊರೊನಾ ವಾರಿಯರ್ಸ್ ಕೂಡ ಸೋಂಕಿಗೆ ಬಲಿಯಾಗುತ್ತಿದ್ದಾರೆ. ಇದೀಗ ಕೊರೊನಾ ಮೈಸೂರಿನ ವೈದ್ಯ ಡಾ.ಚಂದ್ರ ಕುಮಾರ್ ಕೋವಿಡ್‌ 19ಗೆ ಬಲಿಯಾಗಿದ್ದಾರೆ.

ಈ ಕುರಿತು ಸಂತಾಪ ಸೂಚಿಸಿರುವ ಆರೋಗ್ಯ ಸಚಿವ ಶ್ರೀರಾಮುಲು, ಮೈಸೂರಿನ ವೈದ್ಯರಾದ ಡಾ. ಚಂದ್ರ ಕುಮಾರ್ ಅವರು ಕೋವಿಡ್ ಸೋಂಕಿಗೆ ತುತ್ತಾಗಿ ಮೃತಪಟ್ಟಿರುವುದು ದುಃಖಕರ. ರಾಜ್ಯದಲ್ಲಿ ಕೊರೊನ ಸೋಂಕಿನ ಚಿಕಿತ್ಸಾ ಕಾರ್ಯದಲ್ಲಿ ನೂರಾರು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಹಗಲಿರುಳೂ ಶ್ರಮಿಸುತ್ತಿದ್ದಾರೆ.

Home add -Advt

ಸೋಂಕು ತಗುಲುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ವೈದ್ಯಕೀಯ ಸಿಬ್ಬಂದಿಯು ರೋಗಿಗಳ ಕಾಳಜಿ ಜೊತೆಗೆ ತಮ್ಮ ಸುರಕ್ಷೆಯ ಕಡೆಗೂ ಗಮನ ನೀಡುವುದು ಅತ್ಯಗತ್ಯವಾಗಿದೆ. ಹಾಗಾಗಿ ಎಲ್ಲಾ ವೈದ್ಯ ಸಿಬ್ಬಂದಿ ಎಚ್ಚರವಹಿಸಲು ಕೋರುತ್ತೇನೆ.

ಚಂದ್ರ ಕುಮಾರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬ ಸದಸ್ಯರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.

Related Articles

Back to top button