Advertisement

ಮಾಸ್ಕ್ ವಿತರಿಸಿ ಶುಭ ಕೋರಿದ ಲಕ್ಷ್ಮಿ ತಾಯಿ ಫೌಂಡೇಶನ್

ಯಾವುದೇ ಆತಂಕವಿಲ್ಲದೆ ಪರೀಕ್ಷೆ ಬರೆಯಿರಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಮಾಸ್ಕ್ ವಿತರಿಸುವ ಮೂಲಕ ಲಕ್ಷ್ಮಿ ತಾಯಿ ಫೌಂಡೇಶನ್ ವತಿಯಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾರ್ಥಿಗಳಿಗೆ ಶುಭ ಕೋರಲಾಯಿತು.
ಬೆಳಗ್ಗೆ ವಿದ್ಯಾರ್ಥಿಗಳು ಆಗಮಿಸುತ್ತಿದ್ದಂತೆ ಲಕ್ಷ್ಮಿ ತಾಯಿ ಫೌಂಡೇಶನ್ ಕಾರ್ಯಕರ್ತರು ವಿದ್ಯಾರ್ಥಿಗಳನ್ನು ನಗುಮೊಗದಿಂದ ಸ್ವಾಗತಿಸಿ, ಯಾವುದೇ ಆತಂಕವಿಲ್ಲದೆ ಪರೀಕ್ಷೆ ಬರೆಯಿರಿ. ಎಲ್ಲ ರೀತಿಯ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಹೇಳಿ ಮಾಸ್ಕ್ ಗಳನ್ನು ನೀಡಿದರು. ವಿದ್ಯಾರ್ಥಿಗಳ ಪಾಲಕರಿಗೂ ಮಾಸ್ಕ್ ಗಳನ್ನು ನೀಡಲಾಯಿತು.
ಮಹಾಮಾರಿ ಕೊರೊನಾ ಅಟ್ಟಹಾಸದ ಹಿನ್ನೆ ಲೆಯಲ್ಲಿ ವಿದ್ಯಾರ್ಥಿಗಳ ಪೋಷಕರು ಆತಂಕದಲ್ಲಿದ್ದು ಆದಷ್ಟು ಬೇಗ ಭಗವಂತ ಎಲ್ಲರ ಆತಂಕವನ್ನು ದೂರಾಗಿಸಲಿ ಎಂದು ಪ್ರಾರ್ಥಿಸಿ, ಎಲ್ಲರ ಬದುಕು  ಉಜ್ವಲವಾಗಲಿ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹಾರೈಸಿದ್ದಾರೆ. 
ಮೃಣಾಲ್ ಹೆಬ್ಬಾಳಕರ್, ಯುವರಾಜ ಕದಂ ಸೇರಿದಂತೆ ನೂರಾರು ಕಾರ್ಯಕರ್ತರು ಮಾಸ್ಕ್ ವಿತರಿಸುವ ಕಾರ್ಯ ನೆರವೇರಿಸಿದರು.