Beereshwara add 9
KLE1099 Add

ಕ್ಷೇತ್ರದ ಯಾವುದೇ ಭಾಗ ಅಭಿವೃದ್ಧಿ ವಂಚಿತವಾಗಲು ಅವಕಾಶ ಕೊಡುವುದಿಲ್ಲ – ಲಕ್ಷ್ಮಿ ಹೆಬ್ಬಾಳಕರ್ 

No part of the constituency is allowed to be deprived of development - Lakshmi Hebbalkar ​30 ಲಕ್ಷ ರೂ,ಗಳ ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಪೂಜೆ ನೆರವೇರಿಸಿದ ಶಾಸಕಿ

30 ಲಕ್ಷ ರೂ,ಗಳ ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಪೂಜೆ ನೆರವೇರಿಸಿದ ಶಾಸಕಿ

ಪ್ರಗತಿವಾಹಿನಿ ಸುದ್ದಿ, ​ಬೆಳಗಾವಿ ​ಸಂಪೂರ್ಣ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮೂಲಭೂತ ಸೌಲಭ್ಯ ಒದಗಿಸಲು ಮೊದಲ ಆದ್ಯತೆಯ ಮೇಲೆ ಕೆಲಸ ಮಾಡುತ್ತಿದ್ದೇನೆ. ​ಪ್ರಕೃತಿ ವಿಕೋಪದ ನಡುವೆಯೂ ಇದರಲ್ಲಿ ಬಹುತೇಕ ಯಶಸ್ವಿಯಾಗಿದ್ದೇನೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹೇಳಿದರು.

ಬೆಳಗಾವಿ ಗ್ರಾಮೀಣ​ ಕ್ಷೇತ್ರದ ಸುಳಗಾ ಗ್ರಾಮದಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ವತಿಯಿಂದ ​30 ಲಕ್ಷ ರೂ,ಗಳ ವೆಚ್ಚದಲ್ಲಿ ವೆಂಗುರ್ಲಾ ಮುಖ್ಯ ರಸ್ತೆಯಿಂದ ಜನತಾ ಕಾಲೋನಿವರೆಗೆ ರಸ್ತೆಯ ಡಾಂಬರೀಕರಣದ ಕಾಮಗಾರಿಗಳಿಗೆ​ ಸೋಮವಾರ ಸಂಜೆ ಚಾಲನೆ ನೀಡಿ ಅವರು ಮಾತನಾಡಿದರು. 
ನಾನು ಅಭಿವೃದ್ಧಿ ವಿಷಯದಲ್ಲಿ ಯಾವುದೇ ರಾಜಕೀಯ ಮಾಡುವುದಿಲ್ಲ. ಕ್ಷುಲ್ಲಕ ರಾಜಕಾರಣ ಮಾಡುವವರಿಗೆ ಉತ್ತರಿಸುತ್ತ ಹೋದರೆ ಅದರಿಂದ ನನ್ನ ಸಮಯ ವ್ಯರ್ಥವಾಗುತ್ತದೆ. ನನ್ನ ರಾಜಕಾರಣ ಏನಿದ್ದರೂ ಚುನಾವಣೆಗೆ ಸೀಮಿತ. ಉಳಿದ ಸಮಯದಲ್ಲಿ ಕೇವಲ ಅಭಿವೃದ್ಧಿ. ಕ್ಷೇತ್ರದ ಯಾವುದೇ ಭಾಗ ಅಭಿವೃದ್ಧಿಯಿಂದ ವಂಚಿತವಾಗಲು ಅವಕಾಶ ಕೊಡುವದಿಲ್ಲ ಎಂದು ಅವರು ಹೇಳಿದರು.
 
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಗ್ರಾಮ ಪಂಚಾಯತಿ ಅಧಕ್ಷರಾದ ತಾಯಿ ಕಲಕಾಂಬ್ಕರ, ಗ್ರಾಮ ಪಂಚಾಯತ್ ಸದಸ್ಯರು, ಬಾಗಣ್ಣ ನರೋಟಿ, ಯಲ್ಲಪ್ಪ ಕಲಕಾಂಬ್ಕರ, ಮಲ್ಲಪ್ಪ ಸುಳಗೇಕರ್, ಮಹಾದೇವ ಕಂಗ್ರಾಳಕರ್, ಮಾರುತಿ ಪಾಟೀಲ, ಬಾಳು ಪಾಟೀಲ, ವರ್ಷಾ, ಲಕ್ಷ್ಮೀ ನಾಯ್ಕ್ ಗ್ರಾಮದ ಮಹಿಳೆಯರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
You cannot copy content of this page