Reporter wanted
Crease wise (28th Jan)

ಒಂದೇ ಕಾಮಗಾರಿ: ಇಬ್ಬರು ಶಾಸಕರಿಂದ ಪ್ರತ್ಯೇಕವಾಗಿ ಚಾಲನೆ!

ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ

ಬೆಳಗಾವಿ ಎಪಿಎಂಸಿ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ:

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :  ಒಂದೇ ಕಾಮಗಾರಿಗೆ ಇಬ್ಬರು ಶಾಸಕರು ಕೆಲವೇ ಗಂಟೆಗಳ ಅಂತರದಲ್ಲಿ ಚಾಲನೆ ನೀಡಿದ ವಿಚಿತ್ರ ಘಟನೆ ಬೆಳಗಾವಿಯಲ್ಲಿ ಮಂಗಳವಾರ ನಡೆಯಿತು. 

ಶಾಸಕರನ್ನು ಹೊರತುಪಡಿಸಿ ಇತರ ಗಣ್ಯರೆಲ್ಲ ಎರಡೂ ಕಾರ್ಯಕ್ರಮಗಳಲ್ಲಿ ಉಪಸ್ಥಿತರಿದ್ದರು. ಎರಡೂ ಕಾರ್ಯಕ್ರಮಗಳ ಮಾಧ್ಯಮ ಪ್ರಕಟಣೆಯಲ್ಲಿ ಶಾಸಕರ ಹೆಸರಷ್ಟೇ ಬದಲು.

ಲಕ್ಷ್ಮಿ ಹೆಬ್ಬಾಳಕರ್ ಚಾಲನೆ ನೀಡುತ್ತಿರುವುದು

ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯನ್ನು ಅಭಿವೃದ್ದಿ ಪಡಿಸುವ ದೃಷ್ಟಿಯಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮಂಗಳವಾರ ಬೆಳಗ್ಗೆ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಒಟ್ಟೂ 4  ಕೋಟಿ ರೂ.ಗಳ ವೆಚ್ಚದಲ್ಲಿ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಸಗಟು ತರಕಾರಿ ಮಾರುಕಟ್ಟೆ, ಬ್ಲಾಕ್ ಡಿ ನಲ್ಲಿ ೩೫ ಅಂಗಡಿಗಳ ನಿರ್ಮಾಣ ಹಾಗೂ ಇವುಗಳಿಗೆ ಹೊಂದಿಕೊಂಡಂತೆ ಆರ್.ಸಿ.ಸಿ ಗಟಾರು, ಕಾಂಕ್ರೀಟ್ ರಸ್ತೆ ನಿರ್ಮಿಸುವುದು, ಸಗಟು ತರಕಾರಿ ಮಾರುಕಟ್ಟೆ ಬ್ಲಾಕ್ ಎ ನಲ್ಲಿನ ನೆಲಮಾಳಿಗೆಯಲ್ಲಿ ೧೮ ಮಳಿಗೆಗಳನ್ನು ನಿರ್ಮಿಸುವುದರ ಜೊತೆಗೆ ರೈತ ಭವನ ಕಟ್ಟಡ ಹಾಗೂ ಅತಿಥಿ ಗೃಹದ ನವೀಕರಣದ ಕಾಮಗಾರಿಗಳಿಗೆ ಶ ಅಡಿಗಲ್ಲನ್ನಿಟ್ಟು ಪೂಜೆ ಸಲ್ಲಿಸಿದರು.

ಮಧ್ಯಾಹ್ನ 2.34ಕ್ಕೆ ಫೇಸ್ ಬುಕ್ ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಫೋಟೋ, ವಿವರ ಹಾಕಿದ್ದರು.  https://www.facebook.com/746158708872500/posts/1860074430814250/

ಸಂಜೆ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಸ್ಥಳಕ್ಕೆ ತೆರಳಿ ಪುನಃ ಎಲ್ಲ ಕಾಮಗಾರಿಗಳಿಗೆ ಚಾಲನೆ ನೀಡಿದರು.

 ಎರಡೂ ಕಾರ್ಯಕ್ರಮಗಳ ಸಂದರ್ಭದಲ್ಲಿ  ಎಪಿಎಮ್‌ಸಿ ಅಧ್ಯಕ್ಷ ಯುವರಾಜ ಕದಮ, ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಅರುಣ ಕಟಾಂಬಳೆ, ಎಪಿಎಮ್‌ಸಿ ಸದಸ್ಯರುಗಳಾದ ಸುಧೀರ ಗಡ್ಡೆ, ಸಂಜು ಮಾದರ, ಆನಂದ ಪಾಟೀಲ, ಮನೋಜ ಮತ್ತಿಕೊಪ್ಪ, ಆರ್. ಕೆ. ಪಾಟೀಲ, ಲಗಮಣ್ಣ ನಾಯ್ಕ, ಪಡಿಗೌಡ ಪಾಟೀಲ, ಮಹೇಶ ಗೋವೆಕರ, ಮಹೇಶ ಗುಬ್ಬಿ, ನಿಂಗಪ್ಪ ಬಸ್ಸಾಪೂರ  ಉಪಸ್ಥಿತರಿದ್ದರು.

ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಬೆಳಗ್ಗೆಯೇ ಕಾರ್ಯಕ್ರಮ ನಡೆಸಿ ಮಧ್ಯಾಹ್ನ 2.34ಕ್ಕೆ ಫೇಸ್ ಬುಕ್ ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ವಿವರ ಹಾಕಿದ್ದರು. ಸಂಜೆ 5.30ಕ್ಕೆ ಇದೇ ಮಾಹಿತಿಯನ್ನು ಅನಿಲ ಬೆನಕೆ ಪರವಾಗಿ ಶಾಸಕರ ಹೆಸರನ್ನಷ್ಟೆ ಬದಲಿಸಿ ಮಾಧ್ಯಮಗಳಿಗೆ ಕಳುಹಿಸಲಾಗಿದೆ.

4 ಕೋಟಿ ರೂ. ವೆಚ್ಚದಲ್ಲಿ ಎಪಿಎಂಸಿ ಅಭಿವೃದ್ಧಿ ಕೆಲಸಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಚಾಲನೆ